ಮರಗೋಡುವಿನಲ್ಲಿ ʼದುರ್ಗಾಷ್ಟಮಿ ಮತ್ತು ಗೋಪೂಜೆʼ ಸೆ. 26ಕ್ಕೆ

Share this post :

ಮರಗೋಡು : ವಿಶ್ವ ಹಿಂದು ಪರಿಷತ್‌, ಬಜರಂಗದಳ, ಮಾತೃಶಕ್ತಿ ದುರ್ಗಾವಾಗಿನಿ ಮರಗೋಡು ಘಟಕ ವತಿಯಿಂದ ದುರ್ಗಾಷ್ಟಮಿ ಮತ್ತು ಗೋಪೂಜೆ ಸೆ.26ರಂದು ನಡೆಯಲಿದೆ.
ಮರಗೋಡುವಿನ ಶಿವಪಾರ್ವತಿ ದೇವಾಲಯದಲ್ಲಿ ಬೆಳಗ್ಗೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಮಾತೃಶಕ್ತಿ ಪ್ರಮುಖ್‌ ಗುಡ್ಡೆಮನೆ ರೋಹಿಣಿ ಚಂದ್ರಶೇಖರ್‌ ಅಧ್ಯಕ್ಷತೆ ವಹಿಸಲಿದ್ದು, ನಿವೃತ್ತ ಶಿಕ್ಷಕಿ ಭಾಗೀರಥಿ ಹುಲಿತಾಳ ಮುಖ್ಯ ಅತಿಥಿಯಾಗಿ ಪಾಲ್ಗೊಳ್ಳಲಿದ್ದಾರೆಂದು ಪ್ರಕಟಣೆ ತಿಳಿಸಿದೆ.

coorg buzz
coorg buzz