ಹಾರಂಗಿ ಜಲಾಶಯದಲ್ಲಿ ನೀರಿನ ಪ್ರಮಾಣ ಎಷ್ಟಿದೆ ಗೊತ್ತಾ..? ಇಲ್ಲಿದೆ ಅಂಕಿ ಅಂಶ…

Rainfall

Share this post :

ಕುಶಾಲನಗರ : ಕೊಡಗಿನ ಏಕೈಕ ಅಣೆಕಟ್ಟು ಹಾರಂಗಿಯಲ್ಲಿ ಈ ಬಾರಿ ನಿರೀಕ್ಷೆಗೂ ಮುನ್ನವೇ ನೀರು ಭರ್ತಿಯಾಗಿದೆ. ೨,೮೫೯ ಅಡಿ ಗರಿಷ್ಠ ಸಾಮರ್ಥ್ಯದ ಡ್ಯಾಂನಲ್ಲಿ ಇಂದಿನ ನೀರಿನ ಮಟ್ಟ ೨೮೫೧.೫೨ ಅಡಿ ಇದೆ.
ಕಳೆದ ವರ್ಷ ಇದೇ ದಿನ ೨೮೨೯.೧೪ ಅಡಿ ನೀರಿತ್ತು. ಕಳೆದ ೨೪ ಗಂಟೆಯಲ್ಲಿ ಹಾರಂಗಿ ವ್ಯಾಪ್ತಿಯಲ್ಲಿ ೧೨.೫೦ ಮಿ.ಮೀ. ಮಳೆಯಾಗಿದೆ. ಕಳೆದ ವರ್ಷ ಇದೇ ದಿನ ೩.೨೦ ಮಿ.ಮೀ. ಮಳೆಯಾಗಿತ್ತು. ಇಂದಿನ ಒಳಹರಿವು ೪೬೧೨ ಕ್ಯುಸೆಕ್, ಕಳೆದ ವರ್ಷ ಇದೇ ದಿನ ೩೭೮ ಕ್ಯುಸೆಕ್ ಇತ್ತು. ಜಲಾಶಯದಿಂದ ನದಿಗೆ ೫೦೦೦ ಕ್ಯುಸೆಕ್ ನೀರು ಹರಿಯಬಿಡಲಾಗುತ್ತಿದೆ.

coorg buzz
coorg buzz