ಕುಶಾಲನಗರ(Kushalnagar) : ನಿಯಮ ಮೀರಿ ಧ್ವನಿವರ್ದಕ/ಡಿಜೆ(dj) ಬಳಸುವವರ ವಿರುದ್ಧ ಕ್ರಮಕ್ಕೆ ಜಿಲ್ಲಾ ಪೊಲೀಸ್(police) ಮುಂದಾಗಿದೆ. ಕುಶಾಲನಗರ ವ್ಯಾಪ್ತಿಯಲ್ಲಿ ನಿನ್ನೆ ಕಾರ್ಯಾಚರಣೆ ನಡೆಸಿದ ಪೊಲೀಸರು ವಿವಿಧೆಡೆ ಬಳಸಲಾಗಿದ್ದ ಡಿಜೆ ಸಿಸ್ಟಂಗಳನ್ನು ವಶಕ್ಕೆ ಪಡೆದಿದ್ದಾರೆ. ಮಾದಾಪಟ್ಟಣ ವ್ಯಾಪ್ತಿಯಲ್ಲಿ 04, ಜನತಾ ಕಾಲನಿ ಗಣೇಶೋತ್ಸವ ಮೆರವಣಿಗೆಯಲ್ಲಿ ಬಳಸಲಾಗಿದ್ದ ಒಂದು ಡಿಜೆ ಸಿಸ್ಟಂ, ಧ್ವನಿವರ್ದಕ, ಲಾರಿಯನ್ನು ವಶಪಡಿಸಿಕೊಂಡಿದ್ದಾರೆ. ಜೊತೆಗೆ ಸಮಿತಿಯವರ ಮೇಲೆ ಕೇಸ್ ಕೂಡಾ ದಾಖಲಾಗಿದೆ.
ನಿಯಮ ಮೀರಿ ಅಬ್ಬರದ ಸಂಗೀತ ಹಾಕಿದಲ್ಲಿ ಕ್ರಮ ಕೈಗೊಳ್ಳುವುದಾಗಿ ಜಿಲ್ಲಾ ಪೊಲೀಸ್ ಅಧಿಕಾರಿಗಳು ಗಣೇಶೋತ್ಸವಕ್ಕೆ ಮುಂಚಿತವಾಗಿಯೇ ಹೇಳಿದ್ದರು. ಆದರೆ ಮೊದಲ ಮೂರ್ನಾಲ್ಕು ದಿನ ಎಲ್ಲೂ ಕ್ರಮವಾಗಿರಲಿಲ್ಲ. ಇದೀಗ ಕುಶಾಲನಗರ ಭಾಗದಲ್ಲಿ ಅಲರ್ಟ್ ಆಗಿದ್ದಾರೆ. ನಮ್ಮ ವಿರುದ್ಧ ಮಾತ್ರ ಕ್ರಮ ಏಕೆ? ಬೇರೆ ಕಡೆಗಳಲ್ಲೂ ಬಳಸಿದ್ದಾರೆ ಅಲ್ಲಿ ಕ್ರಮ ಏಕಿಲ್ಲ. ಹಿಂದುಗಳ ಆಚರಣೆಯನ್ನು ಟಾರ್ಗೆಟ್ ಮಾಡಲಾಗುತ್ತಿದೆ ಎಂದು ಸ್ಥಳೀಯರು ಆಕ್ರೋಶ ಹೊರಹಾಕಿದ್ದಾರೆ.



