Yes To Access ಆ್ಯಪ್‍ಗೆ ಜಿಲ್ಲಾಧಿಕಾರಿ ಚಾಲನೆ

District Collector

Share this post :

coorg buzz

ಮಡಿಕೇರಿ:- ಭಾರತ ಸರ್ಕಾರದ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಮಂತ್ರಾಲಯವು ಸುಗಮ್ಯ ಯಾತ್ರಾ ಕಾರ್ಯಕ್ರಮದಡಿ ಎಲ್ಲಾ ಸರ್ಕಾರಿ ಕಚೇರಿಗಳು, ಸಾರ್ವಜನಿಕ ಸ್ಥಳಗಳು, ಉದ್ಯಾನವನಗಳು, ಗ್ರಂಥಾಲಯಗಳು, ಪ್ರವಾಸಿತಾಣಗಳಲ್ಲಿ ಅಡೆತಡೆ ರಹಿತ ವಾತಾವರಣ ಒಳಗೊಂಡಿರುವ ಮಾಹಿತಿಯನ್ನು ಕಲೆಹಾಕಿ ವಿಶೇಷ ಚೇತನ ಸ್ನೇಹಿ ವಾತಾವರಣ ಇರುವ ಬಗ್ಗೆ ಸೋಶಿಯಲ್ ಆಡಿಟ್ ಮಾಡಲು ಎಸ್ ಟು ಎಕ್ಸಸ್ (Yes To Access) ಎಂಬ ಮೊಬೈಲ್ ಆ್ಯಪ್‍ನ್ನು ಅಭಿವೃದ್ಧಿ ಪಡಿಸಿದ್ದು ಜಿಲ್ಲೆಯಲ್ಲಿರುವ ಸರ್ಕಾರಿ ಹಾಗೂ ಖಾಸಗಿ ಕಟ್ಟಡಗಳ ಸೋಶಿಯಲ್ ಆಡಿಟ್ ಮಾಡುವ ಸಂಬಂಧ ಇಂದು ಕೊಡಗು ಜಿಲ್ಲಾಧಿಕಾರಿ ಕಚೇರಿಯಲ್ಲಿ ಸಾಂಕೇತಿಕವಾಗಿ ಜಿಲ್ಲಾಧಿಕಾರಿ ವೆಂಕಟ್ ರಾಜಾ ಅವರು ಬುಧವಾರ ಚಾಲನೆ ನೀಡಿದರು

ಈ ಸಂದರ್ಭ ಹೆಚ್ಚುವರಿ ಜಿಲ್ಲಾಧಿಕಾರಿ ಆರ್.ಐಶ್ವರ್ಯ, ಉಪ ವಿಭಾಗಾಧಿಕಾರಿ ವಿನಾಯಕ್ ನರ್ವಡೆ, ಜಿಲ್ಲಾ ಅಂಗವಿಕಲರ ಕಲ್ಯಾಣಾಧಿಕಾರಿ ಕೆ.ಜಿ.ವಿಮಲ, ಸ್ವಾಮಿ ವಿವೇಕಾನಂದ ಯೂತ್ ಮೂವ್ಮೆಂಟ್‍ನ ಕಾರ್ಯಕ್ರಮ ವ್ಯವಸ್ಥಾಪಕರಾದ ಅಂಕಾಚಾರಿ ಹಾಗೂ ಕಚೇರಿ ಸಿಬ್ಬಂದಿಗಳು ಹಾಜರಿದ್ದರು.