ಮೂರ್ನಾಡು: ಕಾಂತೂರು ಗ್ರಾಮ ಪಂಚಾಯತಿ ವ್ಯಾಪ್ತಿಗೆ ಒಳಪಟ್ಟ 12 ಅಂಗನವಾಡಿ ಕೇಂದ್ರಗಳಿಗೆ (Anganwadis) ಗ್ರಾಮ ಪಂಚಾಯಿತಿ ವತಿಯಿಂದ ಬಕೆಟ್, ಮಗ್, ಹ್ಯಾಂಡ್ ವಾಶ್, ಬ್ಲೀಚಿಂಗ್ ಪೌಡರ್, ಚಾಪೆ, ಕೌದಿ, ಕಂಬಳಿ, ಪಿನಾಯಿಲ್, ಪೊರಕೆಗಳನ್ನು ವಿತರಿಸಲಾಯಿತು.
ಗ್ರಾಮ ಪಂಚಾಯಿತಿ ಅಧ್ಯಕ್ಷ ಕುಶನ್ ರೈ, ಉಪಾಧ್ಯಕ್ಷೆ ರೇಖಾ, ಸದಸ್ಯರಾದ ಸುಜಾತ, ವಿಜಯಲಕ್ಷ್ಮಿ, ಮೂಡೇರ ಅಶೋಕ, ಅಯ್ಯಪ್ಪ, ಈರ ಸುಬ್ಬಯ್ಯ, ಅಪ್ಪಚಂಡ ಮೀನಾಕ್ಷಿ ದೇವಯ್ಯ, ಅವರೇಮಾದಂಡ ಅನಿಲ್, ಪುಷ್ಪಲತಾ, ಪುಷ್ಪ, ಸೋಮಣ್ಣ, ದಿವ್ಯ, ನಿಂಗಪ್ಪ, ಕೃಷ್ಣಪ್ಪ, ಯಶ್ವಿನ್ ಪೊನ್ನಪ್ಪ, ರಾಜೇಶ್, ರೀತ, ಲತಾ, ಶ್ರುತಿ, ಸುಂದರಿ, ಸೌಮ್ಯ ಸತೀಶ್, ಪ್ರಭಾರ ಸಹಾಯಕ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಮೇಪಾಡಂಡ ಸವಿತಾ ಕೀರ್ತನ್, ಅಂಗನವಾಡಿ ಕಾರ್ಯಕರ್ತೆಯರಾದ ಜಯಂತಿ, ಚೈತ್ರ, ಪ್ರಮೀಳಾ, ಭವ್ಯ, ಗೌರಿ, ಕುಸುಮ, ಗೀತಾ, ಉಮಾವತಿ, ಸಮೀರಾ, ಜಯಶ್ರೀ, ಗಿರಿಜಾ ಬಾಯಿ, ಭವಾನಿ ಉಪಸ್ಥಿತರಿದ್ದರು.