ಡೈರೆಕ್ಟರ್‌ ಕ್ಯಾಪ್‌ ತೊಟ್ಟ ನಟಿ ಹರ್ಷಿಕಾ ಪೂಣಚ್ಚ – ಚಿ. ಸೌಜನ್ಯ ಪೋಸ್ಟರ್‌ ಬಿಡುಗಡೆ ಮಾಡಿದ ಕೊಡಗಿನ ಕುವರಿ… ಮೊದಲ ನಿರ್ದೇಶನದಲ್ಲೇ ಸಖತ್‌ ಸದ್ದು ಮಾಡಿದ ಹರ್ಷಿಕಾ..!

Share this post :

ಮಡಿಕೇರಿ : ರಾಜ್ಯದಲ್ಲಿ ಈಗ ಧರ್ಮಸ್ಥಳದ ಸೌಜನ್ಯ ಪ್ರಕರಣ ಸದ್ದು ಮಾಡುತ್ತಿದೆ. ದೌರ್ಜನ್ಯಕ್ಕೊಳಗಾಗಿ ಪ್ರಾಣ ಕಳೆದುಕೊಂಡ ಯುವತಿಗೆ ನ್ಯಾಯಕ್ಕಾಗಿ ಆಗ್ರಹಿಸಿ ವಿವಿಧೆಡೆ ಪ್ರತಿಭಟನೆಗಳು ಕೂಡಾ ನಡೆಯುತ್ತಿದೆ. ಈ ನಡುವೆ ಬಹುಭಾಷಾ ನಟಿ ಹರ್ಷಿಕಾ ಪೂಣಚ್ಚ ಚಿ. ಸೌಜನ್ಯ ಎಂಬ ಚಿತ್ರ ನಿರ್ಮಾಣಕ್ಕೆ ಮುಂದಾಗಿದ್ದಾರೆ.
ಕಳೆದ ವರ್ಷ ಹೆಣ್ಣು ಮಗುವಿಗೆ ಜನ್ಮ ನೀಡಿದ ಬಳಿಕ ತಾಯ್ತನದ ಸಂಭ್ರಮದಲ್ಲಿದ್ದ ಹರ್ಷಿಕಾ ಪೂಣಚ್ಚ ಮತ್ತೆ ಫೀಲ್ಡ್‌ಗೆ ರೀ ಎಂಟ್ರಿಯಾಗಿದ್ದಾರೆ. ಅದು ಕೂಡಾ ಡೈರೆಕ್ಟರ್‌ ಕ್ಯಾಪ್‌ ತೊಡುವ ಮೂಲಕ. ಮೊದಲ ಬಾರಿಗೆ ಡೈರೆಕ್ಷನ್‌ಗೆ ಇಳಿದಿರುವ ಹರ್ಷಿಕಾ ಚೊಚ್ಚಲ ಚಿತ್ರದ ಮೂಲಕ ರಾಜ್ಯಾದ್ಯಂತ ಸದ್ದು ಮಾಡುತ್ತಿದ್ದಾರೆ. ಕಂಸಾಳೆ ಫಿಲಂಸ್‌ ಹಾಗೂ ಭುವನಂ ಎಂಟರ್‌ಟೈನ್‌ಮೆಂಟ್ ಅಡಿ ನಿರ್ಮಾಣವಾಗುತ್ತಿರುವ ಸಿನಿಮಾಗೆ ಕು. ಸೌಜನ್ಯ ಅಂತ ಟೈಟಲ್‌ ಇಡಲಾಗಿದ್ದು, ಖುದ್ದು ಹರ್ಷಿಕಾ ಪೂಣಚ್ಚ ಅವರೇ ಟೈಟಲ್‌ ಅನೌನ್ಸ್‌ ಮಾಡಿದ್ದಾರೆ. ನಟ ಕಿಶೋರ್‌ ಮುಖ್ಯ ಪಾತ್ರದಲ್ಲಿ ಕಾಣಿಸಿಕೊಂಡರೆ, ಖಳ ನಾಯಕರಾಗಿ ಉಗ್ರಂ ಮಂಜು, ಕಾಕ್ರೋಚ್ ಸುಧಿ ನಟಿಸುತ್ತಿದ್ದಾರೆ.