ಧರ್ಮಸ್ಥಳ : ನೂರಕ್ಕೂ ಹೆಚ್ಚು ಶವಗಳನ್ನ ಹೂತಿದ್ದೇನೆಂದು ವ್ಯಕ್ತಿಯೊಬ್ಬ ಹೇಳಿದ ಕೇಸ್‌ನಲ್ಲಿ ಮಹತ್ವದ ಬೆಳವಣಿಗೆಯಾಗಿದೆ. ಮೂರು ದಿನದಿಂದ ನಡೆಯುತ್ತಿದ್ದ ಉತ್ಕನನದಲ್ಲಿ ಇಂದು ಆರನೇ ಪಾಯಿಂಟ್‌ನಲ್ಲಿ ಮೂಳೆ ಪತ್ತೆಯಾಗಿದೆ. ಮೊನ್ನೆಯಿಂದ ದೂರುದಾರ ವ್ಯಕ್ತಿಯ ಸಮ್ಮುಖದಲ್ಲಿ ಎಸ್‌ಐಟಿ ಶೋಧ ಕಾರ್ಯ ನಡೆಸಿತ್ತು. ಸಣ್ಣ ಹಿಟಾಚಿಯನ್ನೂ ಬಳಸಲಾಗಿತ್ತು. ಇಂದು ನೇತ್ರಾವತಿ ನದಿ ತೀರದಲ್ಲಿ ಗುರುತಿಸಿದ್ದ ಪಾಯಿಂಟ್ ನಂಬರ್ ಆರರಲ್ಲಿ ಕಳೇಬರದ ಕುರುಹು ಪತ್ತೆಯಾಗಿದೆ. ಅದು ಮನುಷ್ಯನದ್ದಾ, ಪ್ರಾಣಿಯದ್ದಾ ಎಂಬ ಬಗ್ಗೆ ತಿಳಿಯಲು ಅದನ್ನ ವಿಧಿವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಿ, ಅಲ್ಲಿಂದ ವರದಿ ಬಂದ ಬಳಿಕವಷ್ಟೇ ತಿಳಿಯಲಿದೆ.



