ಮಾ.27 ಮತ್ತು 28 ರಂದು ಕುಂದುರುಮೊಟ್ಟೆ ಶ್ರೀ ಚೌಟಿ ಮಾರಿಯಮ್ಮ ದೇವಾಲಯದಲ್ಲಿ ದೈವಕೋಲ

Share this post :

ಮಡಿಕೇರಿ : ನಗರದ ನಾಲ್ಕು ಶಕ್ತಿದೇವತೆಗಳಲ್ಲಿ ಒಂದಾದ ಕುಂದುರುಮೊಟ್ಟೆ ಶ್ರೀ ಚೌಟಿ ಮಾರಿಯಮ್ಮ ದೇವಾಲಯದಲ್ಲಿ ಮಾ.27 ಮತ್ತು 28 ರಂದು ದೈವಕೋಲ ಜರುಗಲಿದೆ.
ಎರಡು ದಿನ ಕಾಲ ದೇವಾಲಯದಲ್ಲಿ ವಿವಿಧ ವಿಶೇಷ ಪೂಜಾ ಕೈಂಕರ್ಯಗಳು ಜರುಗಲಿದ್ದು, ಮಾ.27ರ ರಾತ್ರಿ 7 ಗಂಟೆಯಿಂದ ಮಾ.28ರ ಅಪರಾಹ್ನದವರೆಗೆ ಶ್ರೀ ವಿಷ್ಣುಮೂರ್ತಿ, ರಕ್ತೇಶ್ವರಿ, ಕುಟ್ಟಿಶಾಸ್ತಾನ್, ಉಚ್ಚಿಟ್ಟ ವೀರನ್ ಗುಳಿಗನ್, ಭೂತಂ, ಪಾಷಾಣಮೂರ್ತಿ ಮತ್ತು ಅಜ್ಜಪ್ಪ ತೆರೆ ನಡೆಯಲಿದೆ.
ಮಾ.28 ರಂದು ರಾತ್ರಿ ಭಕ್ತಾಧಿಗಳಿಗೆ ಅನ್ನದಾನ ನಡೆಯಲಿದ್ದು, ಮಾ.28ರ ಬೆಳಿಗ್ಗೆ 5 ಗಂಟೆಗೆ ಶ್ರೀ ವಿಷ್ಣುಮೂರ್ತಿ ದೈವದ ಮೇಲೇರಿ ಮತ್ತು 9 ಗಂಟೆಗೆ ರಕ್ತೇಶ್ವರಿ ದೈವಕೋಲ ಜರುಗಲಿದೆ. ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳುವಂತೆ ದೇವಾಲಯದ ಮ್ಯಾನೇಜಿಂಗ್ ಟ್ರಸ್ಟಿ ಮತ್ತು ಆಡಳಿತ ಮಂಡಳಿಯವರು ಕೋರಿದ್ದಾರೆ.