ಕಾವೇರಿ ತೀರ್ಥೋದ್ಭವ – ಸ್ವಾಗತ ಕೋರಿ ಹಾಕಲಾಗಿದ್ದ ಬ್ಯಾನರ್‌ ಹರಿದು ವಿಕೃತಿ – ಕ್ರಮಕ್ಕೆ ಆಗ್ರಹ

Share this post :

ಭಾಗಮಂಡಲ : ನಾಡಿನ ಜೀವನದಿ ಕಾವೇರಿಯ ತವರು ತಲಕಾವೇರಿಯಲ್ಲಿ ತುಲಾ ಸಂಕ್ರಮಣ ಜಾತ್ರೋತ್ಸವ ಅ.17ರಂದು ನಡೆಯಲಿದೆ. ಈ ಸಂಬಂಧ ಭಕ್ತಾದಿಗಳಿಗೆ ಸ್ವಾಗತ ಕೋರಿ ಕಾರುಗುಂದದಲ್ಲಿ ಅಳವಡಿಸಲಾಗಿದ್ದ ಬ್ಯಾನರ್‌ ಅನ್ನು ಕಿಡಿಗೇಡಿಗಳು ಹರಿದು ಹಾಕಿದ್ದಾರೆ.
ಗೌಡ ಸಮಾಜಗಳ ಒಕ್ಕೂಟ ವತಿಯಿಂದ ವಿವಿಧೆಯಲ್ಲಿ ಸ್ವಾಗತದ ಬ್ಯಾನರ್‌ ಅಳವಡಿಸಲಾಗಿತ್ತು. ಕಾರುಗುಂದ ವ್ಯಾಪ್ತಿಯಲ್ಲಿ ರಸ್ತೆ ಬದಿ ಅಳವಡಿಸಲಾಗಿದ್ದ ಬ್ಯಾನರ್‌ ಅನ್ನು ಹರಿದು ಹಾಕಲಾಗಿದೆ. ಈ ಕೃತ್ಯವನ್ನು ವಿವಿಧ ಗೌಡ ಸಮಾಜಗಳು ಖಂಡಿಸಿದ್ದು, ಕೃತ್ಯವೆಸಗಿದ ಕಿಡಿಗೇಡಿಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದಾರೆ. ಪೊಲೀಸ್‌ ಇಲಾಖೆ ಕೂಡಾ ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸಿದೆ.ʼ

coorg buzz
coorg buzz