ಪ್ರವಾಸಿಗರ ಮೇಲೆ ಹಲ್ಲೆ ಪ್ರಕರಣ – ನಂದಿಮೊಟ್ಟೆ ಜೀಪ್‌ ಚಾಲಕರ ವಿರುದ್ಧ ಪ್ರಕರಣ ದಾಖಲು..!

Share this post :

ಮಡಿಕೇರಿ : ನಗರದ ಹೊರವಲಯದ ನಂದಿಮೊಟ್ಟೆಯಲ್ಲಿ ಇತ್ತೀಚೆಗೆ ಪ್ರವಾಸಿಗರ ಮೇಲೆ ಹಲ್ಲೆ ನಡೆಸಿದ ಸಂಬಂಧ ಮಡಿಕೇರಿ ಗ್ರಾಮಾಂತರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮಾಂದಲಪಟ್ಟಿಗೆ ಬಾಡಿಗೆ ತೆರಳುವ ವಿಚಾರಕ್ಕೆ ಸಂಬಂಧಪಟ್ಟಂತೆ ಪ್ರವಾಸಿ ಕುಟುಂಬ ಹಾಗೂ ಸ್ಥಳೀಯ ಜೀಪ್‌ ಚಾಲಕರ ನಡುವೆ ಗಲಾಟೆ ನಡೆದು, ಈ ವೇಳೆ ಅಲ್ಲಿನ ಚಾಲಕರು ಕೆಲವರು ಪ್ರವಾಸಿಗರ ಮೇಲೆ ಹಲ್ಲೆ ನಡೆಸಿದ್ದರು. ಘಟನೆಯ ವಿಡಿಯೋ ಎಲ್ಲೆಡೆ ಹರಿದಾಡಿತ್ತು. ಬಳಿಕ ಹಲ್ಲೆಗೊಳಗಾದ ಮಂದಿ ಆಸ್ಪತ್ರೆಗೆ ದಾಖಲಾಗಿದ್ದರು. ನಂತರ ದಾಖಲೆ ಸಹಿತವಾಗಿ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಈ ಸಂಬಂಧ ಜೀಪ್‌ ಚಾಲಕರಾದ ಅಗಸ್ಟಿನ್ ಕೆ.ಇ., ಥೋಮಸ್, ನಾರಾಯಣ್ ಹಾಗೂ ಇತರರ ವಿರುದ್ಧ ಪ್ರಕರಣ ದಾಖಲಾಗಿದೆ. ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಮಾಂದಲಪಟ್ಟಿಗೆ ಬಾಡಿಗೆ ತೆರಳುವ ವಿಚಾರವಾಗಿ ಕೆಲವು ಜೀಪ್‌ ಚಾಲಕರು ಅತಿರೇಖದಿಂದ ವರ್ತಿಸುತ್ತಾರೆಂಬ ಆರೋಪ ಈ ಹಿಂದಿನಿಂದಲೂ ಇದೆ. ಈ ವಿಚಾರವಾಗಿ ಗಲಾಟೆಯಾಗುತ್ತಿರುವುದು ಇದೇ ಮೊದಲೇನಲ್ಲ. ನಿರಂತರವಾಗಿ ಆಗುತ್ತಿದೆ, ಕೆಲವೊಂದು ವಿಚಾರ ಮಾತ್ರ ಹೀಗೆ ಹೊರಗೆ ಬರುತ್ತಿದೆ. ಆದರೆ ಅಧಿಕಾರಿಗಳು, ಜಿಲ್ಲಾಡಳಿತ ಅಲ್ಲಿನವರ ಆಟಾಟೋಪಕ್ಕೆ ನಿಯಂತ್ರಣ ಹಾಕಲು ವಿಫಲರಾಗಿದ್ದಾರೆಂದು ಆ ಭಾಗದ ಸಾರ್ವಜನಿಕರು ಆರೋಪಿಸಿದ್ದಾರೆ.

coorg buzz
coorg buzz