ಜಿಲ್ಲಾಸ್ಪತ್ರೆಯಲ್ಲಿ ರಕ್ತ ಕೊರತೆ – ಸ್ವಯಂಪ್ರೇರಿತರಾಗಿ ರಕ್ತದಾನ ಮಾಡಿ ಮಾದರಿಯಾದ ಪೊಲೀಸ್‌ ಅಧಿಕಾರಿಗಳು ಮತ್ತು ಸಿಬ್ಬಂದಿ

Share this post :

ಮಡಿಕೇರಿ : ಕೊಡಗು ಜಿಲ್ಲಾಸ್ಪತ್ರೆಯ ರಕ್ತನಿಧಿ ಘಟಕದಲ್ಲಿ ಕೆಲವು ದಿನದಿಂದ ರಕ್ತದ ಬೇಡಿಕೆ ಹೆಚ್ಚಾಗಿದೆ. ಆದರೆ ಅಗತ್ಯ ಪ್ರಮಾಣದಲ್ಲಿ ಸಂಗ್ರಹ ಇಲ್ಲದ ಕಾರಣ ದಾನಿಗಳಿಂದ ರಕ್ತ ಕೊಡಿಸುವ ಕಾರ್ಯವನ್ನು ಅನೇಕರು ಮಾಡುತ್ತಿದ್ದಾರೆ.
ವಿವಿಧ ಸಂಘ ಸಂಸ್ಥೆಗಳ ಪ್ರಮುಖರು ದಾನಿಗಳನ್ನು ಸಂಪರ್ಕಿಸಿ ರಕ್ತ ಸಂಗ್ರಹಿಸುವ ಕಾರ್ಯದಲ್ಲಿ ನಿರತರಾಗಿದ್ದಾರೆ. ಈ ಸಮಾಜಮುಖಿ ಕಾರ್ಯಕ್ಕೆ ಜಿಲ್ಲೆಯ ಪೊಲೀಸರು ಕೂಡಾ ಸಾಥ್‌ ನೀಡಿದ್ದಾರೆ. ಕಳೆದೊಂದು ವಾರದಿಂದ ಜಿಲ್ಲೆಯ ವಿವಿಧೆಡೆ ಕರ್ತವ್ಯ ನಿರ್ವಹಿಸುತ್ತಿರುವ ಅಧಿಕಾರಿಗಳು ಹಾಗೂ ಸಿಬ್ಬಂದಿ ಸ್ವಯಂಪ್ರೇರಿತರಾಗಿ ಬಂದು ಜಿಲ್ಲಾಸ್ಪತ್ರೆಯಲ್ಲಿ ರಕ್ತದಾನ ಮಾಡಿದ್ದಾರೆ. ವೀರಾಜಪೇಟೆ ವೃತ್ತ ನಿರೀಕ್ಷಕರಾಗಿರುವ ಅನೂಪ್‌ ಮಾದಪ್ಪ ಕೂಡಾ ರಕ್ತದಾನ ಮಾಡಿ ಇಲಾಖೆಯ ಸಿಬ್ಬಂದಿಗೆ ಪ್ರೇರಣೆಯಾಗಿದ್ದಾರೆ. ಈವರೆಗೆ ಅವರು 17 ಬಾರಿ ರಕ್ತದಾನ ಮಾಡಿದ್ದಾರೆಂದು ಬ್ಲಡ್‌ ಡೋನರ್ಸ್‌ ಸಂಸ್ಥೆಯ ಕ್ರಿಯೇಟಿವ್‌ ಖಲೀಲ್‌ ತಿಳಿಸಿದ್ದಾರೆ.

coorg buzz
coorg buzz