ಮಡಿಕೇರಿ : ಬಿಜೆಪಿಯ ಹಿರಿಯ ಮುಖಂಡ ಕೆದಂಬಾಡಿ ಎಸ್.ಪ್ರಕಾಶ್(76) ನಿಧನರಾಗಿದ್ದಾರೆ. ಮೃತರಿಗೆ ಪತ್ನಿ, ಓರ್ವ ಪುತ್ರಿ ಇದ್ದಾರೆ. ಅಂತ್ಯಕ್ರಿಯೆ ನಾಳೆ ನಡೆಯಲಿದೆ.
ಇವರು ನಗರ ಬಿಜೆಪಿ ಅಧ್ಯಕ್ಷರಾಗಿ, ದೇಚೂರು ದೇವಾಲಯದ ಸ್ಥಾಪಕ ಅಧ್ಯಕ್ಷರಾಗಿ, ಜನತಾ ಬಜಾರ್ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿದ್ದರು. ಬಾಲಭವನದ ಅಧ್ಯಕ್ಷರಾಗಿದ್ದರು.



