ಕೊಡಗು ವಿವಿ ಮುಚ್ಚುವ ಕ್ರಮ ಖಂಡಿಸಿ ಬಿಜೆಪಿ, ಎಬಿವಿಪಿಯಿಂದ ಪಾದಯಾತ್ರೆ: ಸಂಸದ ಭಾಗಿ

Yaduveer Wadiyar

Share this post :

ಕೊಡಗು ವಿವಿ (Kodagu University) ಮುಚ್ಚಲು ನಿರ್ಧರಿಸಿರುವ ರಾಜ್ಯ ಕಾಂಗ್ರೆಸ್ ಸರ್ಕಾರದ ವಿರುದ್ಧ ಆಳುವಾರ ಗ್ರಾಮದಿಂದ ಕುಶಾಲನಗರದ ವರೆಗೆ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ (ABVP) ವತಿಯಿಂದ ಹಮ್ಮಿಕೊಂಡಿದ್ದ ಪ್ರತಿಭಟನೆ ಹಾಗೂ ಪಾದಯಾತ್ರೆಯಲ್ಲಿ ಮೈಸೂರು-ಕೊಡಗು ಸಂಸದ ಯದುವೀರ್ ಒಡೆಯರ್ (Yaduveer Wadiyar) ಪಾಲ್ಗೊಂಡರು.

Bjp Abvp march

ಮಾಜಿ ಶಾಸಕ ಅಪ್ಪಚ್ಚು ರಂಜನ್ ಹಾಗೂ ಎಂಎಲ್ಸಿ ಸುಜಾಕುಶಾಲಪ್ಪ, ಭಾರತೀಶ್ ಮತ್ತಿತರರು ಭಾಗಿ. ನೂರಾರು ವಿದ್ಯಾರ್ಥಿಗಳುˌ ಕಾರ್ಯಕರ್ತರು ಹಾಗೂ ಯುವಜನತೆಯೊಂದಿಗೆ ಹೆಜ್ಜೆ ಹಾಕಿದರು. ಎರಡು ವರ್ಷಗಳ ಹಿಂದೆ ಚಿಕ್ಕ ಅಳುವಾರ ಸ್ನಾತಕೋತ್ತರ ಕೇಂದ್ರದಲ್ಲಿ ಆರಂಭಗೊಂಡ ಕೊಡಗು ವಿಶ್ವವಿದ್ಯಾನಿಲಯವನ್ನು ಉಳಿಸಬೇಕು ಹಾಗೂ ರಾಜ್ಯದಲ್ಲಿ ಯಾವುದೇ ವಿವಿಗಳನ್ನು ಮುಚ್ಚದೆ, ಅವುಗಳನ್ನು ಅಭಿವೃದ್ದಿಗೊಳಿಸಿ ವಿದ್ಯಾರ್ಥಿಗಳ ಶೈಕ್ಷಣಿಕ ಹಿತದೃಷ್ಟಿಯಿಂದ ಅವುಗಳನ್ನು ಮುಂದುವರೆಸಬೇಕೆಂದು ಆಗ್ರಹಿಸಲಾಯಿತು.