ಬೆಂಗಳೂರು : ಬೈಕ್‌ ಮತ್ತು ಲಾರಿ ಡಿಕ್ಕಿ – ಇಬ್ಬರು ಯುವ ನೃತ್ಯ ಕಲಾವಿದರ ದುರ್ಮರಣ..!

Share this post :

ಬೆಂಗಳೂರು :  ಬೈಕ್‌ ಮತ್ತು ಬೈಕ್ ಡಿಕ್ಕಿಯಾಗಿ ಬೈಕ್‌ನಲ್ಲಿದ್ದ ಇಬ್ಬರು ಸ್ಥಳದಲ್ಲೇ ಕೊನೆಯುಸಿರೆಳೆದ ದಾರುಣ ಘಟನೆ ನೆಲಮಂಗಲ ಬಳಿಯ ಕುಣಿಗಲ್ದ‌ನಲ್ಲಿ  ನಡೆದಿದೆ.

ಕುಣಿಗಲ್ ಬೈಪಾಸ್ ಬಳಿ ಈ ಅಪಘಾತ ಸಂಭವಿಸಿದೆ.  ಶ್ರೀರಾಂಪುರದ ಪ್ರಜ್ವಲ್‌ ಹಾಗೂ ಸಹನಾ ಮೃತ ದುರ್ದೈವಿಗಳು. ಇಬ್ಬರು ಕೂಡಾ ನೃತ್ಯ ಕಲಾವಿದರು ಎಂದು ತಿಳಿದುಬಂದಿದೆ. ಬೈಕ್‌ಗೆ ಡಿಕ್ಕಿಪಡಿಸಿದ ಲಾರಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದು, ತನಿಖೆ ನಡೆಸುತ್ತಿದ್ದಾರೆ.