ಬೇಗೂರು ರಸ್ತೆ ಸಂಪರ್ಕ ಕಡಿತ ಬಾರೀ ಮಳೆಗೆ ಪೊನ್ನಂಪೇಟೆ ತಾಲೂಕು ಕುಟ್ಟ ಬಾಡಗ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬೇಗೂರು ಸಂಪರ್ಕ ರಸ್ತೆ ಕುಸಿದು ಸಂಪರ್ಕ ಕಡಿತಗೊಂಡಿದೆ. ವಿಷಯ ಅರಿತು ಕೂಡಲೇ ಸ್ಪಂದಿಸಿ ಸ್ಥಳ ಕ್ಕೆ ಭೇಟಿ ನೀಡಿದ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾದ ಧರ್ಮಜ ಉತ್ತಪ್ಪ, ಡಿ.ಸಿ.ಸಿ. ಪದಾಧಿಕಾರಿಗಳಾದ ಮುಕ್ಕಾಟೀರ ಸಂದಿಪ್, ಚೊಟ್ಟಿಯನಮಾಡ ವಿಶು ರಂಜಿ, ಅನುಷ್ಠಾನ ಸಮಿತಿ ಅಧ್ಯಕ್ಷರಾದ ಕಾಳೀಮಾಡ ಪ್ರಶಾಂತ್, ಆಲೇಮಾಡ ಸೋಮಣ್ಣ ಅವರು ತಾತ್ಕಾಲಿಕವಾಗಿ ಕೂಡಲೇ ರಸ್ತೆ ಸರಿಪಡಿಸಿ ಮುಂದಿನ ದಿನಗಳಲ್ಲಿ ಮಳೆ ಕಳೆದ ನಂತರ ಸೇತುವೆ ನಿರ್ಮಾಣ ಮಾಡುವುದಾಗಿ ಭರವಸೆ ನೀಡಿದ್ದಾರೆ. ಈ ಸಂದರ್ಭ ಜಿಲ್ಲಾ ಪಂಚಾಯಿತಿ ಎ.ಇ.ಇ. ಹಾಗೂ ಜೆ.ಇ. ಉಪಸ್ಥಿತರಿದ್ದರು.
