ಹಾಸನದಿಂದ ಬೂಕರ್‌ವರೆಗೆ ಬಾನು ಮುಷ್ತಾಕ್‌ ಪಯಣ – Coorg Buzzನಲ್ಲಿ ಪ್ರಸಾರವಾಗಲಿದೆ ಸಾಧಕಿಯ ಸಂದರ್ಶನ..!

Share this post :

ಮಡಿಕೇರಿ : ಸಾಹಿತ್ಯ ಕ್ಷೇತ್ರದಲ್ಲಿ ಅಂತಾರಾಷ್ಟ್ರೀಯ ಮಟ್ಟದ ಅತ್ಯುನ್ನತ ʼಬೂಕರ್‌ ಪ್ರಶಸ್ತಿʼ ವಿಜೇತ ಸಾಹಿತಿ ಬಾನು ಮುಷ್ತಾಕ್‌ ಅವರನ್ನು Coorg Buzz ಸಂದರ್ಶಿಸಿದೆ.

ಹಾಸನದಲ್ಲಿರುವ ಅವರ ಮನೆಗೆ ಭೇಟಿ ನೀಡಿದ ಕೂರ್ಗ್‌ ಬಜ್ಹ್‌ ತಂಡ ಅವರನ್ನು ಅಭಿನಂದಿಸಿತು. ಬಳಿಕ ಬಾನು ಮುಷ್ತಾಕ್‌ ಅವರು ನಮ್ಮ ವಾರದ ವಿಶೇಷ ಪಾಡ್‌ಕಾಸ್ಟ್ ʼin & out’ಗಾಗಿ ವಿಶೇಷ ಸಂದರ್ಶನ ನೀಡಿದರು.‌ ನಿರಂತರ ಪ್ರವಾಸ, ಪ್ರತಿನಿತ್ಯ ಹಲವಾರು ಕಾರ್ಯಕ್ರಮ, ಬಿಡುವಿಲ್ಲದ ವೇಳಾಪಟ್ಟಿಯ ನಡುವೆ ಒಂದು ಗಂಟೆ ಕಾಲ ನಮ್ಮ ಮಾತುಕೆಯಲ್ಲಿ ಭಾಗಿಯಾದರು.
ಬಾಲ್ಯದ ಜೀವನ, ಶೈಕ್ಷಣಿಕವಾಗಿ ಹಿಂದುಳಿದಿದ್ದ ತಾವು ಓದು ಬರಹದಲ್ಲಿ ಆಸಕ್ತಿ ಹೆಚ್ಚಿಸಿಕೊಂಡಿದ್ದು, ಶಿಕ್ಷಣಕ್ಕಾಗಿ ಜಿಲ್ಲೆಯಿಂದ ಜಿಲ್ಲೆಗೆ ಅಲೆದಾಡಿದ್ದು, ಹೊರ ಜಗತ್ತಿನಲ್ಲಿ ತೊಡಗಿಸಿಕೊಂಡ ಸಂದರ್ಭ, ಕುಟುಂಬ & ಮನೆಯವರಿಂದ ಎದುರಾದ ಆಕ್ಷೇಪ ಮತ್ತು ಪ್ರೋತ್ಸಾಹ, ಸಾರ್ವಜನಿಕ ಹೋರಾಟದಲ್ಲಿ ಭಾಗಿಯಾಗಿದ್ದು, ಜನಪ್ರತಿನಿಧಿಯಾಗಿ ಆಯ್ಕೆಯಾಗಿದ್ದು, ವೈವಾಹಿಕ ಜೀವನ, ಹೀಗೆ ಅನೇಕ ವಿಚಾರಗಳನ್ನು ಹಂಚಿಕೊಂಡಿದ್ದಾರೆ.

ಈ ಮಾತುಕತೆಯ ಸಂಪೂರ್ಣ ವೀಡಿಯೋ ಜುಲೈ 19ರ ಸಂಜೆ 06 ಗಂಟೆಗೆ ಕೂರ್ಗ್‌ ಬಜ್ಹ್‌ ಯೂಟ್ಯೂಬ್‌ ಚಾನಲ್‌ನಲ್ಲಿ ಪ್ರಸಾರವಾಗಲಿದೆ, ತಪ್ಪದೆ ವೀಕ್ಷಿಸಿ…

coorg buzz
coorg buzz