ವೀರಾಜಪೇಟೆ : ಹೆಗ್ಗಳ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಗೆ ಜಾಗೃತಿ ಮತ್ತು ಸಿಸ್ಕೊ ಸಂಸ್ಥೆ ವತಿಯಿಂದ ವಿವಿಧ ಪರಿಕರಗಳನ್ನು ಉಚಿತವಾಗಿ ವಿತರಿಸಿದರು. 20 ಸ್ವಯಂ ಸೇವಕರನ್ನೊಳಗೊಂಡ ತಂಡ ಆಗಮಿಸಿ ವಿದ್ಯಾರ್ಥಿಗಳಿಗೆ ಆಟದ ಸಾಮಗ್ರಿ, ಡ್ರಾಯಿಂಗ್ ಚಾರ್ಟ್, ಲೇಖನಿ, ಶಾಲೆಯ ಗೋಡೆಗಳಿಗೆ ಪೇಂಟಿಂಗ್, ಮಧ್ಯಾಹ್ನದ ಉಪಹಾರ, 20 ವಿದ್ಯಾರ್ಥಿಗಳಿಗೆ ಆಹಾರದ ಕಿಟ್ ವಿತರಿಸಿದರು. ಸಿಸ್ಕೊ ಸಂಸ್ಥೆಯ ಮಚ್ಚಾರಂಡ ಅಯ್ಯಪ್ಪ, ಜಾಗೃತಿ ಟ್ರಸ್ಟ್ನ ಆಡಳಿತ ಅಧಿಕಾರಿ ಕಣ್ಣನ್, ಸಂಸ್ಥೆ ಹಾಗೂ ಟ್ರಸ್ಟ್ ಸದಸ್ಯರು, ದಾನಿಗಳಾದ ಕೊಡೀರ ಟಿ. ಗಣಪತಿ, ಗೋಪಾಲ್ ರಾಜ್, ಶಾಲಾ ಮುಖ್ಯ ಶಿಕ್ಷಕಿ ಕಮಲಮ್ಮ, ಸಹ ಶಿಕ್ಷಕಿ
ದುದ್ದಿಯಂಡ ಕಮರುನ್ನೀಸ, ಶಾಲಾ ವಿದ್ಯಾರ್ಥಿಗಳು, ಅಡುಗೆ ಸಿಬ್ಬಂದಿ ಎಸ್ಡಿಸಿ ಅಧ್ಯಕ್ಷರು, ಸದಸ್ಯರು ಈ ಸಂದರ್ಭ ಇದ್ದರು.



