ಬಯವಂಡ ರಿಹಾನ್ ಮುತ್ತಣ್ಣಗೆ ತ.ರಾ.ಸು. ಪ್ರಶಸ್ತಿ

Share this post :

ಪೊನ್ನಂಪೇಟೆ: ಬೆಂಗಳೂರಿನ ಜನ್ಮ ಭೂಮಿ ಸಾಂಸ್ಕೃತಿಕ ನಾಗರೀಕ ವೇದಿಕೆಯ ವತಿಯಿಂದ ದ್ವಿತೀಯ ಪಿ.ಯು. ವಾರ್ಷಿಕ ಪರೀಕ್ಷೆಯಲ್ಲಿ ಕನ್ನಡದಲ್ಲಿ ಅತಿ ಹೆಚ್ಚು ಅಂಕ ಗಳಿಸಿರುವ ಸಾಧಕ ವಿದ್ಯಾರ್ಥಿಗಳಿಗೆ ನೀಡುವ ತ.ರಾ.ಸು. ಪ್ರಶಸ್ತಿಯನ್ನು ಕೊಡಗಿನ ಬಯವಂಡ ರಿಹಾನ್ ಮುತ್ತಣ್ಣ ಪಡೆದುಕೊಂಡಿದ್ದಾರೆ. ಕಳೆದ ಶೈಕ್ಷಣಿಕ ಸಾಲಿನ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಹೆಚ್ಚು ಅಂಕ ಪಡೆದ ಕಾರಣ ಈ ಪ್ರಶಸ್ತಿಗೆ ರಿಹಾನ್ ಮುತ್ತಣ್ಣ ಅವರನ್ನು ಆಯ್ಕೆಗೊಳಿಸಲಾಗಿತ್ತು.

ಬೆಂಗಳೂರಿನ ಮಲ್ಲೇಶ್ವರಂನಲ್ಲಿರುವ ಶ್ರೀ ಕೃಷ್ಣದೇವರಾಯ ಕಲಾಮಂದಿರದಲ್ಲಿ ಮಂಗಳವಾರ ನಡೆದ ಕಾರ್ಯಕ್ರಮದಲ್ಲಿ ರಿಹಾನ್ ಮುತ್ತಣ್ಣ ಅವರಿಗೆ ಈ ಪ್ರಶಸ್ತಿಯನ್ನು ಪ್ರಧಾನ ಮಾಡಲಾಯಿತು. ಬೆಂಗಳೂರಿನ ಆಚಾರ್ಯ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯಲ್ಲಿ ಮೆಕಾನಿಕಲ್ ಇಂಜಿನಿಯರಿಂಗ್ ವಿದ್ಯಾರ್ಥಿಯಾಗಿರುವ ರಿಹಾನ್ ಮುತ್ತಣ್ಣ, ಪೊನ್ನಂಪೇಟೆಯ ನಿವಾಸಿ ಬಯವಂಡ ಕೆ. ನವನೀಶ್ ಮತ್ತು ಪದ್ಮಿನಿ ದಂಪತಿಯ ಪುತ್ರರಾಗಿದ್ದಾರೆ.

coorg buzz
coorg buzz