ಆಟೋದಲ್ಲಿ ಮಲಗಿರುವಾಗಲೇ ಪ್ರಾಣ ಬಿಟ್ಟ ಆಟೋ ಚಾಲಕ!

Auto Driver

Share this post :

ಆಟೋ ಚಾಲಕ ಮಂಜುನಾಥ್ (50) ಅವರು ಆಟೋದಲ್ಲಿ ಮಲಗಿರುವಾಗಲೇ ಪ್ರಾಣ ಬಿಟ್ಟ ಘಟನೆ ಶನಿವಾರಸಂತೆಯಲ್ಲಿ ನಡೆದಿದೆ. ಸಿದ್ದಲಿಂಗಪುರ ನಿವಾಸಿ, ಶನಿವಾರಸಂತೆ ಗುಂಡೂರಾವ್ ಬಡಾವಣೆಯಲ್ಲಿ ವಾಸವಿದ್ದ ಅವರು ಪ್ರತಿನಿತ್ಯ ಆಟೋದಲ್ಲೇ ಮಲಗಿ, ಆಟೋ ನಿಲ್ದಾಣದಲ್ಲಿ ರಾತ್ರಿ ಕಳೆಯುತ್ತಿದ್ದರು ಎಂದು ಹೇಳಲಾಗುತ್ತಿದೆ. ನಿನ್ನೆಯೂ ಸಹ ಆಟೋದಲ್ಲೇ ಮಲಗಿದ್ದರು, ಆದರೆ ಬೆಳಗ್ಗೆ ಇತರೆ ಆಟೋದವರು ಬಂದು ನೋಡಿದಾಗ ಆಟೋದಲ್ಲೇ ಪ್ರಾಣ ಬಿಟ್ಟಿರುವ ವಿಷಯ ತಿಳಿದು ಬಂದಿದೆ.

Auto Driver

ಕಳೆದ 15 ವರ್ಷಕ್ಕೂ ಹೆಚ್ಚು ಕಾಲ ಇದೆ ಆಟೋ ಚಾಲಕ ವೃತ್ತಿಯಲ್ಲಿ ಇದ್ದರು. ಈ ಮೃತ ಆಟೋ ಚಾಲಕ ವಿವಾಹವಾಗಿದ್ದು ಮನೆಯಲ್ಲಿ ಮನಸ್ತಾಪದಿಂದ ಕುಟುಂಬದಿಂದ ದೂರ ಉಳಿದಿದ್ದರು. ಶನಿವಾರಸಂತೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.