ಆಗಸ್ಟ್ 15ರಿಂದ ಫಾಸ್ಟ್ಯಾಗ್ ಸಂಬಂಧಿತ ನವೀಕರಣ…..
ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ (Nitin Gadkari) ಫಾಸ್ಟ್ಯಾಗ್ (FASTag) ಸಂಬಂಧಿತ ಅಪ್ಡೇಟ್ ಅನ್ನು ನೀಡಿದ್ದಾರೆ. ನಿತಿನ್ ಗಡ್ಕರಿ ಆಗಸ್ಟ್ 15, 2025 ರಿಂದ ಜಾರಿಗೆ ಬರುವಂತೆ ಫಾಸ್ಟ್ಟ್ಯಾಗ್ ಆಧಾರಿತ ವಾರ್ಷಿಕ ಪಾಸ್ ಯೋಜನೆಯನ್ನು ಪರಿಚಯಿಸುವುದಾಗಿ ಘೋಷಿಸಿದ್ದಾರೆ. ಈ ಯೋಜನೆಯಡಿ ಕೇವಲ 3,000 ರೂಪಾಯಿಗಳ ಬೆಲೆಯಲ್ಲಿ ವಾರ್ಷಿಕ ಪಾಸ್ ಒದಗಿಸಲಾಗುವುದು ಎಂದು ಹೇಳಿದ್ದಾರೆ.
ಈ ಯೋಜನೆಯನ್ನು ಕಾರ್, ಜೀಪ್ಗಳು ಮತ್ತು ವ್ಯಾನ್ಗಳಂತಹ ವಾಣಿಜ್ಯೇತರ ಖಾಸಗಿ ವಾಹನಗಳಿಗೆ ಮಾತ್ರ ಮೀಸಲಾಗಿದೆ.
ಫಾಸ್ಟ್ಯಾಗ್ ಸಂಬಂಧ ಪರಿಚಯಿಸಲಾದ ಈ ವಾರ್ಷಿಕ ಪಾಸ್ ಸಕ್ರಿಯಗೊಳಿಸಿದ ದಿನಾಂಕದಿಂದ ಒಂದು ವರ್ಷ ಅಥವಾ 200 ಟ್ರಿಪ್ಗಳವರೆಗೆ ಮಾನ್ಯವಾಗಿರುತ್ತದೆ. ಯಾವುದು ಮೊದಲು ತೀರ್ಮಾನವಾಗುತ್ತದೆಯೋ ಅದರ ಆಧಾರದ ಮೇಲೆ ಈ ಪಾಸ್ ಅವಧಿ ಬರಲಿದೆ. ಈ ಯೋಜನೆಯು ಖಾಸಗಿ ವಾಹನ ಸವಾರರಿಗೆ ಆರ್ಥಿಕವಾಗಿ ಲಾಭದಾಯಕವಾಗಿದ್ದು, ರಾಷ್ಟ್ರೀಯ ಹೆದ್ದಾರಿಗಳಲ್ಲಿ ಸುಗಮ ಪ್ರಯಾಣವನ್ನು ಖಾತ್ರಿಪಡಿಸುವ ಗುರಿಯನ್ನು ಹೊಂದಿದೆ.