ಮಡಿಕೇರಿ ತಾಲೂಕು ಬಂಟರ ಸಂಘದ ವತಿಯಿಂದ ಪ್ರತಿಭಾ ಪುರಸ್ಕಾರಕ್ಕೆ ಅರ್ಜಿ ಆಹ್ವಾನ

Share this post :

ಮಡಿಕೇರಿ : ಕೊಡಗು ಜಿಲ್ಲಾ ಬಂಟರ ಸಂಘದ ವತಿಯಿಂದ ಪ್ರತಿ ವರ್ಷ ಎಸ್‌ಎಸ್‌ಎಲ್‌ಸಿ ಮತ್ತು ಪಿಯುಸಿಯಲ್ಲಿ ಉತ್ತಮ ಅಂಕ ಪಡೆದ ಸಮುದಾಯದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಲಾಗುತ್ತಿತ್ತು. ಇನ್ನು ಮುಂದೆ ಮಡಿಕೇರಿ ತಾಲೂಕು ತಾಲೂಕು ಬಂಟರ ಸಂಘದ ವತಿಯಿಂದ ಪ್ರತಿ ವರ್ಷ ನೀಡಲಾಗುವುದೆಂದು ಪ್ರಕಟಣೆ ತಿಳಿಸಿದೆ.
2023-24 ಮತ್ತು 2024-25 ನೇ ಸಾಲಿನ ಎಸ್‌ಎಸ್‌ಎಲ್‌ಸಿ ಮತ್ತು ಪಿಯುಸಿಯಲ್ಲಿ ಶೇಕಡ 90 ಮತ್ತು ಅದಕ್ಕಿಂತ ಮೇಲ್ಪಟ್ಟು ಅಂಕ ಪಡೆದ ವಿದ್ಯಾರ್ಥಿಗಳನ್ನು ಸನ್ಮಾನಿಸಿ ಪ್ರೋತ್ಸಾಹಿಸಲಾಗುವುದು. ಅರ್ಹ ವಿದ್ಯಾರ್ಥಿಗಳು ಸೂಕ್ತ ದಾಖಲಾತಿಯೊಂದಿಗೆ ಅರ್ಜಿ ಸಲ್ಲಿಸುವಂತೆ ತಾಲೂಕು ಬಂಟರ ಸಂಘ ಮನವಿ ಮಾಡಿದೆ. ಪೋಷಕರ ಆಧಾರ್ ಕಾರ್ಡ್ ನಕಲು ಪ್ರತಿ, ವಿದ್ಯಾರ್ಥಿಯ ಭಾವಚಿತ್ರ, ಅಂಕಪಟ್ಟಿಯ ನಕಲು ಪ್ರತಿ, ದೂರವಾಣಿ ಸಂಖ್ಯೆ ನಮೂದಿಸಿ ಅರ್ಜಿ ಸಲ್ಲಿಸಬೇಕು. ಅರ್ಜಿ ಸಲ್ಲಿಸಲು ಜುಲೈ 30 ಕೊನೆ ದಿನವಾಗಿರುತ್ತದೆ. ನಂತರ ಬಂದ ಅರ್ಜಿಗಳನ್ನು ಸ್ವೀಕರಿಸಲಾಗುವುದಿಲ್ಲ. ಅರ್ಜಿ ಸಲ್ಲಿಸಲು ವಿಳಾಸ : ಸದಾಶಿವ ರೈ, ಅಧ್ಯಕ್ಷರು ಮಡಿಕೇರಿ ತಾಲೂಕು ಬಂಟರ ಸಂಘ, c/o ಭೂಮಿಕ ಕನ್ಸಲ್ಟೆನ್ಸಿ, ಸಂಖ್ಯೆ 3 ಅಂಬಿಕ ಹೋಟೆಲ್ ಹತ್ತಿರ, ನಗರ ಸಭೆ ಕಾಂಪ್ಲೆಕ್ಸ್, ಮಡಿಕೇರಿ. ಹೆಚ್ಚಿನ ವಿವರಗಳಿಗೆ ಈ ಕೆಳಗಿನ ದೂರವಾಣಿ ಸಂಖ್ಯೆಯನ್ನು ಸಂಪರ್ಕಿಸಬಹುದು. ಸದಾಶಿವ ರೈ 9480290688, ಚಂದ್ರಶೇಖರ್ ರೈ 7829768736, ವಿಠಲ ರೈ 9071673722, ಶಶಿಕಲಾ ರೈ 8105490618. ಪ್ರತಿಭಾ ಪುರಸ್ಕಾರ ನಡೆಯುವ ದಿನಾಂಕವನ್ನು ಮುಂದೆ ತಿಳಿಸಲಾಗುವುದು.

coorg buzz
coorg buzz