ಮಡಿಕೇರಿ : ಕೊಡಗು ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ(ರಿ)ದ ಅಧ್ಯಕ್ಷರಾಗಿ ಬಾಚರಣಿಯಂಡ ಅನು ಕಾರ್ಯಪ್ಪ ಅವಿರೋಧ ಆಯ್ಕೆಯಾಗಿದ್ದಾರೆ.
ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಯಾಗಿ ಬೇರೆ ಯಾರೂ ಸ್ಪರ್ಧಿಸದ ಕಾರಣ ಅನು ಕಾರ್ಯಪ್ಪ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಅನು ಕಾರ್ಯಪ್ಪ ಹಲವು ವರ್ಷದಿಂದ ಪತ್ರಿಕೋದ್ಯಮದಲ್ಲಿದ್ದು, ಪ್ರಸ್ತುತ ರಿಪಬ್ಲಿಕ್ ಕನ್ನಡ ವಾಹಿನಿಯ ಜಿಲ್ಲಾ ವರದಿಗಾರನಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.
ಸಂಘದ ಪ್ರಧಾನ ಕಾರ್ಯದರ್ಶಿಯಾಗಿ ಹೆಚ್.ಜೆ. ರಾಕೇಶ್, ಉಪಾಧ್ಯಕ್ಷರಾಗಿ ನವೀನ್ ಸುವರ್ಣ, ವನಿತಾ ಚಂದ್ರಮೋಹನ್, ಎ.ಎನ್.ವಾಸು, ಕಾರ್ಯದರ್ಶಿಗಳಾಗಿ ಪಬ್ಲಿಕ್ ಟಿವಿ ಮಲ್ಲಿಕಾರ್ಜುನ್, ರಿಜ್ವಾನ್ ಹುಸೇನ್, ಚೆರಿಯಮನೆ ಸುರೇಶ್ ಆಯ್ಕೆಯಾಗಿದ್ದಾರೆ. ರಾಜ್ಯ ಸಂಘದ ನಿರ್ದೇಶಕರಾಗಿ ಜಿಲ್ಲೆಯಿಂದ ಬಿ.ಆರ್.ಸವಿತಾ ರೈ ಆಯ್ಕೆಯಾಗಿದ್ದಾರೆ. ಉಳಿದಂತೆ ಜಿಲ್ಲಾ ಸಂಘದ 15 ನಿರ್ದೇಶಕರ ಸ್ಥಾನಕ್ಕೆ ನ.09ರಂದು ಚುನಾವಣೆ ನಡೆಯಲಿದೆ.



