ಚೆಯ್ಯಂಡಾಣೆಯ ಚೇಲವಾರ ಗ್ರಾಮದ ಸ್ವಾಮಿ ಕೊರಗಜ್ಜ(Koragajja) ಸನ್ನಿಧಿಯಲ್ಲಿ ಮೇ. 3 ಹಾಗೂ 4 ರಂದು ದ್ವಿತೀಯ ವರ್ಷದ ನೇಮೋತ್ಸವ ನಡೆಯಲಿದೆ. 03/05/2025, ಶನಿವಾರ ಬೆಳಿಗ್ಗೆ 07.00 ಗಂಟೆಗೆ ಗಣಪತಿ ಪೂಜೆ, ಸಂಜೆ 05.00 ಗಂಟೆಗೆ ದೈವಗಳ ಭಂಡಾರ ತೆಗೆಯುವುದು, ಸಂಜೆ 06.00 ಗಂಟೆಗೆ ಮಂತ್ರವಾದಿ ಗುಳಿಗ ದೈವದ ಕೋಲ, ರಾತ್ರಿ 09.00 ಗಂಟೆಗೆ ಸಾರ್ವಜನಿಕರಿಗೆ ಅನ್ನಸಂತರ್ಪಣೆ ರಾತ್ರಿ 10.30 ಗಂಟೆಗೆ ಪಾಷಾಣಮೂರ್ತಿ ದೈವದ ಕೋಲ, ರಾತ್ರಿ 02.00 ಗಂಟೆಗೆ ಮಯೊಂತಿ ದೈವದ ಕೋಲ, 04/05/2025, ಭಾನುವಾರ ಬೆಳಿಗ್ಗೆ 7.00 ಗಂಟೆಗೆ ಕಾರ್ಣಿಕ ದೈವ ಸ್ವಾಮಿ ಕೊರಗಜ್ಜ ದೈವದ ಕೋಲ, ಮಧ್ಯಾಹ್ನ 01.00 ಗಂಟೆಗೆ ಸಾರ್ವಜನಿಕರಿಗೆ ಅನ್ನಸಂತರ್ಪಣೆ ನಡೆಯಲಿದ್ದು ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಶ್ರೀ ದೈವಗಳ ಸೇವೆಯನ್ನು ನಡೆಸಿಕೊಟ್ಟು ಶ್ರೀ ದೈವಗಳ ಗಂಧ ಪ್ರಸಾದವನ್ನು ಸ್ವೀಕರಿಸಿ ದೈವಗಳ ಕೃಪೆಗೆ ಪಾತ್ರರಾಗಬೇಕಾಗಿ ಆಡಳಿತ ಮಂಡಳಿ ಪ್ರಕಟಣೆಯಲ್ಲಿ ತಿಳಿಸಿದೆ.
ವಿಶೇಷ ಸೂಚನೆ : ನೇಮೋತ್ಸವದಲ್ಲಿ ಫೋಟೋ, ವಿಡಿಯೋ ಚಿತ್ರೀಕರಣವನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ.
ಅನ್ನದಾನ ಹಾಗೂ ಧನ ಸಹಾಯ ಮಾಡಲು ಇಚ್ಚಿಸುವವರು ಕೆಳಗಿನ ಸಂಖ್ಯೆಯಲ್ಲಿ ಸಂಪರ್ಕಿ 8762819468, 8197524497, 9449301059 8971171913