ಮೂರ್ನಾಡು : ಒಂದು ಪ್ರದೇಶದ ಅಭಿವೃದ್ಧಿಯ ಅಧ್ಯಯನ ಸಂಬಂಧ ಬೇರೆ ಬೇರೆ ಕಡೆಯ ತಂಡಗಳು ಬಂದು ಪರಿಶೀಲನೆ ಮಾಡುತ್ತವೆ. ಅದೇ ರೀತಿ ಕೊಡಗಿನ ಮಾದರಿ ಗ್ರಾಮ ಪಂಚಾಯಿತಿಯೊಂದಕ್ಕೆ ಅಂಡಮಾನ್ ನಿಕೋಬಾರ್ ದ್ವೀಪದ ಪ್ರತಿನಿಧಿಗಳು ಭೇಟಿ ನೀಡಿ ಮಾಹಿತಿ ಪಡೆದು ತೆರಳಿದ್ದಾರೆ.
ಕೊಡಗು ಜಿಲ್ಲೆ ಮಡಿಕೇರಿ ತಾಲೂಕಿನ ಹೊದ್ದೂರು ಗ್ರಾಮ ಪಂಚಾಯಿತಿಗೆ ಅಂಡಮಾನ್ ನಿಕೋಬಾರ್ ದ್ವೀಪ ಸಮೂಹಗಳ ಪಂಚಾಯತ್ ರಾಜ್ ಸಂಸ್ಥೆಗಳ ಪ್ರತಿನಿಧಿಗಳು ಮತ್ತು ಅಧಿಕಾರಿಗಳು ಭೇಟಿ ನೀಡಿದರು. ಪಂಚಾಯಿತ ವ್ಯಾಪ್ತಿಯ ವಿವಿಧ ರೀತಿಯ ಅಭಿವೃದ್ಧಿ ಬಗ್ಗೆ ಇಲ್ಲಿನ ಅಧಿಕಾರಿಗಳಿಂದ ಮಾಹಿತಿ ಪಡೆದರು. ಪಿಡಿಒ ಅಬ್ದುಲ್ಲಾ ಅವರು ಪಂಚಾಯಿತಿಯ ಕಾರ್ಯಚಟುವಟಿಕೆ ಬಗ್ಗೆ ಮಾಹಿತಿ ಒದಗಿಸಿದರು.