ಕನ್ನಡದ ಖ್ಯಾತ ನಿರೂಪಕಿ/ನಟಿ ಅನುಶ್ರೀ (Anchor Anushree) ಮದುವೆಯ ವದಂತಿ ಕಳೆದ ಕೆಲ ತಿಂಗಳಿಂದ ಕೇಳುಬರುತ್ತಿತ್ತು. ಇದೀಗ ಮದುವೆಗೆ ದಿನಾಂಕ ಫಿಕ್ಸ್ ಆಗಿದೆ. ಕೊಡಗು ಮೂಲದ ರೋಷನ್ ಎಂಬುವವರೊಂದಿಗೆ ಅವರ ವಿವಾಹ ಆಗಸ್ಟ್ 28 ರಂದು ನಡೆಯಲಿದೆ ಎನ್ನಲಾಗಿದೆ. ಸರಳ ಶಾಸ್ತ್ರೋಕ್ತವಾಗಿ ಮದುವೆಯಾಗಿ ಬಳಿಕ ಸಿನಿಮಾ ಇಂಡಿಸ್ಟ್ರಿಯವರನ್ನ ಆಮಂತ್ರಿಸಿ ಅದ್ದೂರಿಯಾಗಿ ಆರತಕ್ಷತೆ ಮಾಡಿಕೊಳ್ಳವ ಸಾಧ್ಯತೆ ಇದೆ.
ಮಂಗಳೂರಿನ ಸುರತ್ಕಲ್ ಮೂಲದ ಅನುಶ್ರೀ, ತಮ್ಮ ಚುರುಕಾದ ನಿರೂಪಣೆಯಿಂದ ಕನ್ನಡ ಕಿರುತೆರೆಯಲ್ಲಿ ದೊಡ್ಡ ಅಭಿಮಾನಿ ಬಳಗವನ್ನು ಗಳಿಸಿದ್ದಾರೆ. ಬಿಗ್ ಬಾಸ್ ಕನ್ನಡ’ದಲ್ಲಿ 76 ದಿನಗಳ ಕಾಲ ಭಾಗವಹಿಸಿದ್ದ ಅನುಶ್ರೀ, ‘ಸುವರ್ಣ ಫಿಲ್ಮ್ ಅವಾರ್ಡ್ಸ್’, ‘ಫಿಲ್ಮ್‌ಫೇರ್ ಅವಾರ್ಡ್ಸ್’ ಮತ್ತು ‘ಎಸ್‌ಐಐಎಂಎ’ನಂತಹ ಪ್ರತಿಷ್ಠಿತ ಕಾರ್ಯಕ್ರಮಗಳನ್ನು ನಿರೂಪಿಸಿದ್ದಾರೆ. ಸಿನಿಮಾ ರಂಗದಲ್ಲಿಯೂ ‘ಬೆಂಕಿಪಟ್ನ’, ‘ಉಪ್ಪು ಹುಳಿ ಖಾರ’ ಮತ್ತು ‘ಮುರಳಿ ಮೀಟ್ಸ್ ಮೀರಾ’ ಚಿತ್ರಗಳಲ್ಲಿ ನಟಿಸಿದ್ದಾರೆ.
ರೋಷನ್ ಅವರು ಸೋಶಿಯಲ್ ಮೀಡಿಯಾದಲ್ಲಿ ಖಾತೆ ಹೊಂದಿದ್ದಾರೆ. ಅನುಶ್ರೀ ಅವರು ಇನ್ಸ್ಟಾಗ್ರಾಮ್ನಲ್ಲಿ ರೋಷನ್ನ ಫಾಲೋ ಕೂಡ ಮಾಡುತ್ತಿದ್ದಾರೆ. ಆದರೆ, ಅವರು ಡಿಪಿಗೆ ತಮ್ಮ ಫೋಟೋನ ಹಾಕಿಲ್ಲ. ಒಂದು ನಾಯಿ ಮರಿ ಫೋಟೋ ಇದೆ ಅಷ್ಟೇ. ಆಗಸ್ಟ್ 28ರಂದು ಅನುಶ್ರೀ ಹಾಗೂ ರೋಷನ್ ವಿವಾಹ ನೆರವೇರಲಿದೆ ಎಂದು ಹೇಳಲಾಗುತ್ತಿದೆ. ಆದರೆ, ಇನ್ನೂ ಈ ವಿಚಾರವನ್ನು ಅನುಶ್ರೀ ಅವರು ಅಧಿಕೃತವಾಗಿ ಹೇಳಿಲ್ಲ.