ಗೂಗಲ್ ಪೇ, ಫೋನ್ ಪೇ ಬಳಕೆದಾರರೇ ಗಮನಿಸಿ: UPI ನಿಯಮಗಳಲ್ಲಿ ಮಹತ್ವದ ಬದಲಾವಣೆ

UPI payment

Share this post :

ಯೂನಿಫೈಡ್ ಪೇಮೆಂಟ್ ಇಂಟರ್‌ಫೇಸ್ (UPI) ವ್ಯವಸ್ಥೆಯಲ್ಲಿ ಆಗಸ್ಟ್ 1 ರಿಂದ ಮಹತ್ವದ ಬದಲಾವಣೆಗಳು ಜಾರಿಗೆ ಬರಲಿವೆ. ಫೋನ್‌ಪೇ, ಗೂಗಲ್ ಪೇ, ಪೇಟಿಎಂ ಮುಂತಾದ ಯುಪಿಐ ಆ್ಯಪ್​ಗಳನ್ನು ದಿನನಿತ್ಯ ಬಳಸುವವರಿಗೆ ಈ ನಿಯಮ ಅನ್ವಯವಾಗುತ್ತದೆ. ಪ್ರತಿ ಯುಪಿಐ ಆ್ಯಪ್​ನಲ್ಲಿ ಕೆಲ ಬಳಕೆದಾರರು ಪದೇ ಪದೇ ತಮ್ಮ ಬ್ಯಾಲೆನ್ಸ್ ಚೆಕ್​ ಮಾಡುತ್ತಾರೆ. ಈಗ ಬ್ಯಾಲನ್ಸ್ ಪರಿಶೀಲನೆ, ಆಟೊಪೇಯಂತಹ ಫೀಚರ್​ಗಳಿಂದ ಹಿಡಿದು ಎಪಿಐ ಬಳಕೆ ಸಂಬಂಧ ಪರಿಷ್ಕೃತ ಮಾರ್ಗಸೂಚಿಯವರೆಗೆ ಕ್ರಮ ಬದಲಾವಣೆ ಮಾಡಲಾಗುತ್ತಿದೆ. ಯುಪಿಐ ಬಳಕೆ ಈಗ ಬಹಳಷ್ಟು ಆಗುತ್ತಿದೆ. ಒಂದು ತಿಂಗಳಲ್ಲಿ 1,600 ಕೋಟಿಯಷ್ಟು ಟ್ರಾನ್ಸಾಕ್ಷನ್​ಗಳು ಆಗುತ್ತವೆ. ಹೀಗಾಗಿ ಯುಪಿಐ ಸೇವೆಗಳನ್ನು ಹೆಚ್ಚು ಸಮರ್ಪಕವಾಗಿಸಲು ಈ ಬದಲಾವಣೆ ಆಗುತ್ತಿದೆ.

ಬ್ಯಾಲೆನ್ಸ್ ಪರಿಶೀಲಿಸುವ ಮಿತಿ: ಈಗ ಯುಪಿಐ ಬಳಕೆದಾರರು ದಿನಕ್ಕೆ 50ಕ್ಕಿಂತ ಹೆಚ್ಚು ಬಾರಿ ಯುಪಿಐನಲ್ಲಿ ಬ್ಯಾಲೆನ್ಸ್​ ಪರಿಶೀಲನೆ ಮಾಡುವಂತಿಲ್ಲ. ಒಂದು ವೇಳೆ ಬಳಕೆದಾರರು 2 ಆ್ಯಪ್ ಗಳನ್ನು ಬಳಸುತ್ತಿದ್ದರೆ, ಒಂದು ಆ್ಯಪ್​ನಲ್ಲಿ 50 ಬಾರಿ ಸೇರಿದಂತೆ ಒಟ್ಟು 100 ಬಾರಿ ಬ್ಯಾಲೆನ್ಸ್​ ಚೆಕ್ ಮಾಡಬಹುದು. ಇದರಿಂದ ಸರ್ವರ್​ ಮೇಲಿನ ಒತ್ತಡ ಕಡಿಮೆ ಆಗುತ್ತದೆ.

ಆಟೊಡೆಬಿಟ್​ಗೆ ನಿರ್ಬಂಧ: ನೆಟ್​ಫ್ಲಿಕ್ಸ್​, ಯೂಟ್ಯೂಬ್​ ಸಬ್​ಸ್ಕ್ರಿಪ್ಶನ್​, ಮ್ಯೂಚುವಲ್​ ಫಂಡ್​, ಎಸ್​ಐಪಿ, ಇಎಂಐ, ಯುಟಿಲಿಟಿ ಬಿಲ್​ ಮುಂತಾದವುಗಳಿಗೆ ಸಂಬಂಧಿಸಿದ ಆಟೋಪೇ ವಹಿವಾಟು ಇನ್ನೂ ಮುಂದೆ ನಿಗದಿತ ಸಮಯದ ಸ್ಲಾಟ್​ಗಳಲ್ಲಿ ಮಾತ್ರ ನಡೆಯಲಿದೆ. ಬೆಳಿಗ್ಗೆ 10ರ ಮೊದಲು, ಮಧ್ಯಾಹ್ನ 1ರಿಂದ ಸಂಜೆ 5ರವರೆಗೆ, ರಾತ್ರಿ 9.30ರ ನಂತರ ಮಾತ್ರ ಇನ್ನು ಮುಂದೆ ಆಟೋಪೇ ನಡೆಯಲಿದೆ. ಇದರಿಂದಾಗಿ ಬೆಳಿಗ್ಗೆ 10ರಿಂದ ಮಧ್ಯಾಹ್ನ 1 ಮತ್ತು ಸಂಜೆ 5 ರಿಂದ ರಾತ್ರಿ 9.30ರವರೆಗಿನ ಪೀಕ್​ ಅವರ್​ನಲ್ಲಿ ಸರ್ವರ್​ ಮೇಲಿನ ಒತ್ತಡ ಕಡಿಮೆಯಾಗುತ್ತೆ.

90 ಸೆಕೆಂಡ್​ ಅಂತರ: ನೀವು ಮಾಡಿದ ಟ್​ರಾನ್ಸಾಕ್ಷನ್ ಇನ್ನೂ ಬಾಕಿ ಇದ್ದು, ಅದರ ಸ್ಟೇಟಸ್ ಪರಿಶೀಲಿಸಲು ದಿನಕ್ಕೆ ಕೇವಲ 3 ಬಾರಿ ಮಾತ್ರ ಸ್ಟೇಟಸ್​ ಚೆಕ್​ ಮಾಡಬಹುದು. ಮತ್ತು ಪ್ರತಿ ಚೆಕಿಂಗ್​ನ ನಡುವೆ ಕನಿಷ್ಠ 90 ಸೆಕೆಂಡ್​ ಅಂತರ ಇರಬೇಕು. ಇದರಿಂದ ಸರ್ವರ್​ ಮೇಲಿನ ಒತ್ತಡ ಕಡಿಮೆಯಾಗಲಿದೆ.

ಪೇಮೆಂಟ್​ ರಿವರ್ಸಲ್​ಗೆ ಮಿತಿ: ಬಳಕೆದಾರ 30 ದಿನಗಳಲ್ಲಿ ಕೇವಲ 10 ಬಾರಿ ಪೇಮೆಂಟ್​ ರಿವರ್ಸಲ್​ ವಿನಂತಿ ಸಲ್ಲಿಸಬಹುದು. ಒಬ್ಬನೇ ವ್ಯಕ್ತಿ ಅಥವಾ ಸಂಸ್ಥೆಗೆ 5 ಬಾರಿ ಮಾತ್ರ ರಿವರ್ಸಲ್​ಗೆ ಕೋರಿಕೆ ಸಲ್ಲಿಸಬಹುದು. ಈ ತಿಂಗಳ ಆರಂಭದಿಂದ ಜಾರಿಯಲ್ಲಿರುವ ನಿಯಮದಂತೆ, ಹಣ ಕಳುಹಿಸುವ ಮೊದಲು ​ರಿಸೀವರ್​ನ ಬ್ಯಾಂಕ್​ನ ಹೆಸರು ಡಿಸ್​ಪ್ಲೇ ಆಗುತ್ತದೆ. ಇದು ತಪ್ಪು ಖಾತೆಗೆ ಹಣ ಕಳುಹಿಸುವ ಸಾಧ್ಯತೆಯನ್ನು ಕಡಿಮೆಯಾಗುತ್ತದೆ.

coorg buzz
coorg buzz