Govinda: ಬಾಲಿವುಡ್ ನಟ ಗೋವಿಂದ ಡಿವೋರ್ಸ್​ ಕೇಸ್​ಗೆ ಹೊಸ ಟ್ವಿಸ್ಟ್​​​

Govinda

Share this post :

ಬಾಲಿವುಡ್​ ಸ್ಟಾರ್​ ನಟ ಗೋವಿಂದ (Govinda) ಮತ್ತು ಅವರ ಪತ್ನಿ ಸುನೀತಾ ಅಹುಜಾ ಅವರ 37 ವರ್ಷಗಳ ದಾಂಪತ್ಯ ಕೊನೆಗೊಳಿಸುವ ವಿಚಾರ ಎಲ್ಲೆಡೆ ವೈರಲ್ ಆಗಿತ್ತು. ನಟ ಗೋವಿಂದ ಮತ್ತು ಪತ್ನಿ ಸುನೀತಾ ಅಹುಜಾ ದಾಂಪತ್ಯದಲ್ಲಿ ಬಿರುಕು ಸುದ್ದಿ ಬಿಟೌನ್​ನಲ್ಲಿ ದೊಡ್ಡ ಸಂಚಲನವನ್ನು ಸೃಷ್ಟಿಸಿದೆ. ಕುಟುಂಬದ ಆಪ್ತ ಮೂಲವೊಂದು ಸುನೀತಾ ಕೆಲವು ತಿಂಗಳ ಹಿಂದೆಯೇ ಗೋವಿಂದ ಅವರಿಗೆ ಡಿವೋರ್ಸ್ ನೋಟಿಸ್ ಕಳುಹಿಸಿದ್ದಾರೆ ಎಂದು ವರದಿಯಾಗಿದೆ.

ಬಾಲಿವುಡ್​ ಸ್ಟಾರ್​ ನಟ ಮತ್ತು ಸುನೀತಾ ಅವರು 1987ರ ಮಾರ್ಚ್‌ನಲ್ಲಿ ಮದುವೆಯಾಗಿದ್ದರು. 37 ವ‍ರ್ಷಗಳ ಕಾಲ ದಾಂಪತ್ಯ ಜೀವನ ನಡೆಸಿದ್ದರು. ಇವರಿಗೆ ಟಿನಾ ಅಜುಜಾ ಮತ್ತು ಯಶವರ್ಧನ್‌ ಅಹುಜಾ ಎನ್ನುವ ಇಬ್ಬರು ಮಕ್ಕಳಿದ್ದಾರೆ. 37 ವ‍ರ್ಷ ಸುನೀತಾ ಅಹುಜಾ ಜೊತೆ ಸಂಸಾರ ಮಾಡಿರುವ ಬಾಲಿವುಡ್ ನಟ ಗೋವಿಂದ ಇದೀಗ ಇಬ್ಬರು ಕೆಲವು ದಿನಗಳಿಂದ ಪ್ರತ್ಯೇಕವಾಗಿ ವಾಸಿಸುತ್ತಿದ್ದರು ಎನ್ನಲಾಗುತ್ತಿದೆ.

Govinda

ಈಗಾಗಲೇ ಬಾಲಿವುಡ್ ನಟ ಗೋವಿಂದ ಪತ್ನಿ ಸುನೀತಾ ಅಹುಜಾ 6 ತಿಂಗಳ ಹಿಂದೆ ಡಿವೋರ್ಸ್​ಗೆ ಅರ್ಜಿ ಸಲ್ಲಿಸಿದ್ದರು. ಆದರೆ ಬಳಿಕ ಇಬ್ಬರ ನಡುವಿನ ಸಮಸ್ಯೆ ಬಗೆಹರಿದಿದೆ. ದಂಪತಿಗಳು ಈಗ ಜೊತೆಯಾಗಿದ್ದಾರೆ ಎಂದು ನಟ ಗೋವಿಂದ್ ಕುಟುಂಬದ ಸ್ನೇಹಿತರೂ ಆಗಿರುವ ವಕೀಲ ಲಲಿತ್ ಬಿಂದಾಲ್ ಹೇಳಿದ್ದಾರೆ. ಹೊಸ ವರ್ಷಕ್ಕೆ ನಾವು ನೇಪಾಳದ ಪಶುಪತಿನಾಥ ದೇವಾಲಯಕ್ಕೆ ಹೋಗಿದ್ದೇವೇ ಜೊತೆಯಾಗಿ ಗೋವಿಂದ ದಂಪತಿ ಪೂಜೆ ನೆರವೇಿರಿಸಿದ್ದಾರೆ.

ಈಗ ಇಬ್ಬರ ಮಧ್ಯೆ ಎಲ್ಲವೂ ಚೆನ್ನಾಗಿದೆ. ದಂಪತಿಗಳ ಮಧ್ಯೆ ಈ ರೀತಿಯ ವಿಷಯಗಳೂ ಆಗುತ್ತಿರುತ್ತವೆ. ಆದ್ರೆ, ಗೋವಿಂದ ದಂಪತಿ ಭಾಂದವ್ಯ ಸದೃಢವಾಗಿದೆ ಹೇಳಿದ್ದಾರೆ. ದಂಪತಿ ಜೊತೆಯಾಗಿದ್ದರೂ, ಜನರು ನೆಗೆಟಿವ್ ಅಂಶಗಳನ್ನು ಮಾತ್ರ ತೆಗೆದುಕೊಳ್ತಾರೆ. ಗೋವಿಂದ ದಂಪತಿಯ ಮಧ್ಯೆ ಯಾವುದೇ ಡಿವೋರ್ಸ್ ಆಗುತ್ತಿಲ್ಲ ಎಂದು ವಕೀಲ ಲಲಿತ್ ಬಿಂದಾಲ್ ಎಲ್ಲ ವದಂತಿಗಳಿಗೆ ತೆರೆ ಎಳೆದಿದ್ದಾರೆ ಎಂದು ವರದಿಯಾಗಿದೆ.