ನವದೆಹಲಿ: ನಟ ದರ್ಶನ್‌ಗೆ ನೀಡಿದ್ದ ಜಾಮೀನು ರದ್ದು ಕೋರಿ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ಸುಪ್ರೀಂ ಕೋರ್ಟ್‌ನಲ್ಲಿ ಪೂರ್ಣಗೊಂಡಿದ್ದು, ಅಂತಿಮ ತೀರ್ಪನ್ನು ಮುಂದಿನ ವಾರಕ್ಕೆ ಕಾಯ್ದಿರಿಸಿದೆ.ರೇಣುಕಾಸ್ವಾಮಿ ಹತ್ಯೆ ಕೇಸ್‌ನಲ್ಲಿ ನಟ ದರ್ಶನ್ (Darshan) ಹಾಗೂ ಇತರರಿಗೆ ಹೈಕೋರ್ಟ್ ಜಾಮೀನು ನೀಡಿದ್ದನ್ನು ಪ್ರಶ್ನಿಸಿ ರಾಜ್ಯ ಸರ್ಕಾರ ಸುಪ್ರೀಂಕೋರ್ಟ್ ಮೆಟ್ಟಿಲೇರಿತ್ತು. ಆರೋಪಿಗಳಾದ ಪವಿತ್ರಾ ಗೌಡ(A1), ದರ್ಶನ್(A2), ಪ್ರದೂಷ್(A14), ಲಕ್ಷ್ಮಣ್(A12), ನಾಗರಾಜ್(A11), ಅನುಕುಮಾರ್(A7), ಜಗದೀಶ್(A6)ಗೆ ಹೈಕೋರ್ಟ್ ಜಾಮೀನು ನೀಡಿತ್ತು. ಇದನ್ನು ಪ್ರಶ್ನಿಸಿ ರಾಜ್ಯ ಸರ್ಕಾರ ಸುಪ್ರೀಂ ಕೊರ್ಟ್‌ನಲ್ಲಿ ಪ್ರಶ್ನಿಸಿತ್ತು. ಇಂದು ವಾದ ಪ್ರತಿ ವಾದವನ್ನು ಆಲಿಸಿದ ಸುಪ್ರೀಂ ಕೋರ್ಟ್ ಹೈಕೋರ್ಟ್‌ನ ತೀರ್ಮಾನಕ್ಕೆ ಅಸಮಾಧಾನ ವ್ಯಕ್ತಪಡಿಸಿತು. ಪ್ರಕರಣದ ಗಂಭೀರತೆ ಬಗ್ಗೆ ಪ್ರಸ್ತಾಪಿಸಿದ ಕೋರ್ಟ್, ಹೈಕೋರ್ಟ್‌ನಲ್ಲಿ ಯಾವ ರೀತಿ ವಿವೇಚನೆ ಬಳಸಲಾಗಿದೆ ಅಂತ ಪ್ರಶ್ನಿಸಿತು.
ಪ್ರಕರಣದ ಹಿನ್ನೆಲೆ…
ಚಿತ್ರದುರ್ಗದ ರೇಣುಕಾಸ್ವಾಮಿ ಎಂಬಾತ ದರ್ಶನ್ ಗೆಳತಿ ಪವಿತ್ರ ಗೌಡಗೆ ಅಶ್ಲೀಲ ಸಂದೇಶ ಕಳುಹಿಸಿದ್ದ ಎಂಬ ಕಾರಣಕ್ಕೆ ಚಿತ್ರಹಿಂಸೆ ಕೊಟ್ಟು 2024 ಜೂನ್ 8ರಂದು ಬರ್ಬರವಾಗಿ ಹ*ತ್ಯೆ ಮಾಡಲಾಗಿತ್ತು. ಜೂನ್ 11ರಂದು ನಟ ದರ್ಶನ್ ಹಾಗೂ ಪವಿತ್ರಾ ಗೌಡ ಬಂಧನವಾಗಿತ್ತು. ಬಳಿಕ ಇತರೆ 15 ಮಂದಿಯ ಬಂಧನವೂ ಆಗಿತ್ತು. ನಂತರ 17 ಮಂದಿ ಜೈಲುಪಾಲಾಗಿದ್ದರು. ಜೈಲಿನಲ್ಲಿ ದರ್ಶನ್‌ಗೆ ನೀಡಿದ್ದ ವಿಶೇಷ ವ್ಯವಸ್ಥೆ ಬಗ್ಗೆ ಸಾಕಷ್ಟು ಆಕ್ರೋಶ ವ್ಯಕ್ತವಾಗಿತ್ತು. ನಂತರ ಬೇರೆ ಜೈಲ್ಗೆ ಕಳುಹಿಸಲಾಗಿತ್ತು.
ನಂತರ ಅಕ್ಟೋಬರ್ 30ಕ್ಕೆ ಅನಾರೋಗ್ಯ ಕಾರಣದಿಂದ ದರ್ಶನ್‌ಗೆ ಮೆಡಿಕಲ್ ಬೇಲ್ ನೀಡಲಾಗಿತ್ತು. ನಂತರ ಡಿಸೆಂಬರ್‌ನಲ್ಲಿ ದರ್ಶನ್ ಸೇರಿ ಎಲ್ಲಾ ಆರೋಪಿಗಳಿಗೆ ಹಥಕೋರ್ಟ್‌ನಲ್ಲಿ ರೆಗ್ಯುಲರ್ ಬೇಲ್ ನೀಡಲಾಗಿತ್ತು. ಹೈಕೋರ್ಟ್‌ನ ಆದೇಶ ಪ್ರಶ್ನಿಸಿ 2025 ಜನವರಿ 07ರಂದು ರಾಜ್ಯ ಸರ್ಕಾರ ಸುಪ್ರೀಂಕೋರ್ಟ್‌ಗೆ ಅರ್ಜಿ ಸಲ್ಲಿಸಿತ್ತು.