ಮಡಿಕೇರಿ : ದಸರಾದ ರಾತ್ರಿ ಬಿದ್ದು ಸಿಕ್ಕಿದ ಚಿನ್ನದ ಕರಿಮಣಿ ಸರವನ್ನು ವ್ಯಕ್ತಿಯೊಬ್ಬರ ಅದರ ಮಾಲೀಕರಿಗೆ ನೀಡಿ ಪ್ರಾಮಾಣಿಕತೆ ತೋರಿದ್ದಾರೆ.
ಮಡಿಕೇರಿ ನಿವಾಸಿ ಕೊಂಗಂಡ ಎಸ್. ದೇವಯ್ಯ ಎಂಬವರ ಪತ್ನಿ ದಸರಾ ವೀಕ್ಷಣೆಗೆ ಬಂದಿದ್ದ ಸಂದರ್ಭ ತಾವು ಧರಿಸಿದ್ದ ಕರಿಮಣಿ ಸವರನ್ನು ಕಳೆದುಕೊಂಡಿದ್ದರು. ಇದು ಕೋಟೆ ಮಹಾಗಣಪತಿ ದೇವಾಲಯ ಸಮಿತಿ ಸದಸ್ಯ ಪುನೀತ್ ಎಂಬವರಿಗೆ ಸಿಕ್ಕಿದೆ. ಅದನ್ನು ಅವರು ಪೊಲೀಸರಿಗೆ ನೀಡಿದ್ದರು. ಈ ಬಗ್ಗೆ ಸಾರ್ವಜನಿಕ ಪ್ರಕಟಣೆ ನೀಡಲಾಗಿತ್ತು. ಈ ಬಗ್ಗೆ ಮಾಹಿತಿ ತಿಳಿದ ದೇವಯ್ಯ ಹಾಗೂ ಅವರ ಪತ್ನಿ ಠಾಣೆಗೆ ಬಂದು ಸರವನ್ನು ಮರಳಿ ಪಡೆದಿದ್ದಾರೆ. ಸರವನ್ನು ಮರಳಿಸಿದ ಪುನೀತ್ ಅವರ ಪ್ರಾಮಾಣಿಕತೆಗೆ ಎಲ್ಲರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.



