ಅಬುದಾಬಿ : ಸಂಯುಕ್ತ ಅರಬ್ ಸಂಸ್ಥಾನದಲ್ಲಿರುವ ಕೊಡಗಿನ ಕುಂಜಿಲ ಜಮಾತ್ ಅನಿವಾಸಿ ಗ್ರಾಮಸ್ಥರ ಸಂಘಟನೆಯಾದ ಕುಂಜಿಲ ಪೈನೆರಿ ಯುಎಇ ಸಮಿತಿ ವತಿಯಿಂದ ಮೀಲಾದುನ್ನಭಿ ಕಾರ್ಯಕ್ರಮ ಸಂಭ್ರಮದಿಂದ ಜರುಗಿತು. ಆಗಸ್ಟ್ 30 ರಂದು ದೇರಾ ದುಬೈಯಲ್ಲಿರುವ ಟ್ರಿಪಲ್ ಹೈಟ್ ಹೋಟೆಲ್ ಸಭಾಂಗಣದಲ್ಲಿ ಇಬ್ರಾಹಿಂ ಉಸ್ತಾದ್ ಕುಂಜಿಲ ಅಧ್ಯಕ್ಷತೆಯಲ್ಲಿ ಕಾರ್ಯಕ್ರಮ ನಡೆಯಿತು.
ಸಯ್ಯದ್ ಮೊಹಮ್ಮದ್ ಹೈದ್ರೋಸಿ ಹುದವಿ ತಂಗಳ್ ಅವರ ದುಆದೊಂದಿಗೆ ಮೀಲಾದ್ ಕಾರ್ಯಕ್ರಮಕ್ಕೆ ಅಧಿಕೃತ ಚಾಲನೆ ದೊರೆಯಿತು, ಹಮೀದ್ ಸಖಾಫಿ ಉಸ್ತಾದ್ ಪುದರೇಕಾರಂಡ, ಮುನೀರ್ ಮಿಸ್ಬಾಯ್ ಉಸ್ತಾದ್ ಬಾರಿಕೇರ, ಮತ್ತು ಷರೀಫ್ ಲತೀಫ್ ಉಸ್ತಾದ್ ಅವರು ಮೌಲೂದ್ ಮಜಿಲಿಸ್ಸಿಗೆ ನೇತೃತ್ವ ನೀಡಿದರು, ಸಮಿತಿ ಕೆಸಿಎಫ್ ನೇತಾರ ಜಲೀಲ್ ನಿಜಾಮಿ ಉಸ್ತಾದ್ ಮುಖ್ಯ ಪ್ರಭಾಷಣ ಮಾಡಿದರು. ಫಾರೂಕ್ ಪುದರೇಕಾರಂಡ ಹಾಗೂ ಹಾಫಿಜ್ ಹಾಶಿರ್ ಅಲ್ ಅಝರಿ ಉಸ್ತಾದರ ನೇತೃತ್ವದಲ್ಲಿ ಬುರ್ದಾ ಮಜಲಿಸ್ ಬಹಳ ಮೋಹಕವಾಗಿ ನಡೆಯಿತು. ಯುಎಇ ಪೈನೆರಿ ಸಮಿತಿ ಕಾರ್ಯದರ್ಶಿ ನಿಜ್ಹಾರ್ ಕುಂಡಂಡ, ಸದಸ್ಯರಾದ ನಾಸಿರ್ ಪಯಡತಂಡ ಮತ್ತಿತರರಿದ್ದರು.



