ಮಡಿಕೇರಿ ಬ್ರೈನೋಬ್ರೈನ್ ಕೇಂದ್ರದಿಂದ ಅಬಾಕಸ್ ವಿದ್ಯಾರ್ಥಿಗಳಿಗೆ ಪದವಿ ಪ್ರದಾನ: ಅಂತಾರಾಷ್ಟ್ರೀಯ ಮಟ್ಟದಲ್ಲಿ ವಿದ್ಯಾರ್ಥಿಗಳ ಸಾಧನೆ

students

Share this post :

ಮಡಿಕೇರಿ : ಮಡಿಕೇರಿಯ ಬ್ರೈನೋಬ್ರೈನ್ ಕೇಂದ್ರದ ವತಿಯಿಂದ ಅಬಾಕಸ್ ವಿದ್ಯಾರ್ಥಿಗಳಿಗೆ ಇತ್ತೀಚೆಗೆ ಪದವಿ ಪ್ರದಾನ ಮಾಡಲಾಯಿತು. ಗರದ ಕ್ರಿಸ್ಟಲ್ ಹಾಲ್ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಬ್ರೈನೋಬ್ರೈನ್ ಕೇಂದ್ರದ 21ನೇ ಬ್ಯಾಚ್ ನ ಒಟ್ಟು 22 ವಿದ್ಯಾರ್ಥಿಗಳು ಪದವಿ ಸ್ವೀಕರಿಸಿದರು. ಎರಡೂವರೆ ವರ್ಷ ೧೦ ಹಂತಗಳಿರುವ ಅಬಾಕಸ್ ಕೋರ್ಸ್ನ್ನು ಈ ವಿದ್ಯಾರ್ಥಿಗಳು (students) ಯಶಸ್ವಿಯಾಗಿ ಪೂರೈಸಿದ್ದಾರೆ.

ಅಂತರಾಷ್ಟ್ರೀಯ ಬ್ರೈನೋಬ್ರೈನ್ ಸಂಸ್ಥೆಯ ಕರ್ನಾಟಕ ಬ್ರೈನೋಬ್ರೈನ್ ಕಿಡ್ಸ್ ಅಕಾಡೆಮಿಯ ಪ್ರಾದೇಶಿಕ ವ್ಯವಸ್ಥಾಪಕ ನೀಲ್ ಕಮಾಲ್ ಸ್ವರ್ಣಕರ್ ಅವರು ವಿದ್ಯಾರ್ಥಿಗಳಿಗೆ ಪದವಿ ಪ್ರದಾನ ಮಾಡಿ ಮಾತನಾಡಿ ಇಲ್ಲಿಯವರಿಗೆ ಮಡಿಕೇರಿ ಕೇಂದ್ರದಿAದ ಒಟ್ಟು ೭೦೦ ವಿದ್ಯಾರ್ಥಿಗಳು ಪದವಿ ಸ್ವೀಕಾರ ಮಾಡಿದ್ದಾರೆ ಎಂದರು.

ಕರ್ನಾಟಕ ರಾಜ್ಯದ ಇತರ ಬ್ರೈನೋಬ್ರೈನ್ ಕೇಂದ್ರಗಳಲ್ಲೇ ಮಡಿಕೇರಿ ಕೇಂದ್ರದ ಅಬಕಾಸ್ ವಿದ್ಯಾರ್ಥಿಗಳನ್ನು ಅವರ ಶಿಸ್ತು ಪರಿಪಾಲನೆ, ಕ್ರಮಬದ್ಧವಾದ ಕಲಿಕೆಯಿಂದಲೇ ಗುರುತಿಸಲಾಗುತ್ತದೆ. ಇದೇ ಕಾರಣಕ್ಕೆ ಈ ಕೇಂದ್ರದ ವಿದ್ಯಾರ್ಥಿಗಳು ಬೇರೆ ಕೇಂದ್ರದ ಮಕ್ಕಳಿಗೆ ಮಾದರಿಯಾಗಿದ್ದಾರೆ ಎಂದು ಶ್ಲಾಘಿಸಿದರು.

ಬೇರೆ ಕೇಂದ್ರಗಳಿಗೆ ಹೋಲಿಸಿದರೆ ಈ ಬಾರಿ ಮಡಿಕೇರಿ ಕೇಂದ್ರದಿAದ ಹೆಚ್ಚಿನ ವಿದ್ಯಾರ್ಥಿಗಳು ಪದವಿ ಪಡೆದಿದ್ದಾರೆ. ಈ ಬ್ಯಾಚ್‌ನಲ್ಲಿ ೪.೫ ವರ್ಷದ ನುಷ್ಕ ಹಾಗೂ ಚೇತಸ್ ರಾಜ್ಯ ಮತ್ತು ರಾಷ್ಟçಮಟ್ಟದ ಸ್ಪರ್ಧೆಯಲ್ಲಿ ಪಾಲ್ಗೊಂಡು ಚಾಂಪಿಯನ್ ಆಗಿದ್ದಾರೆ.
ಮಡಿಕೇರಿ ಕೇಂದ್ರದ ಧೃತಿ ಜೆ.ಪೂಜಾರಿ ದುಬೈನಲ್ಲಿ ನಡೆದ ಅಂತರಾಷ್ಟಿçÃಯ ಮಟ್ಟದ ಸ್ಪರ್ಧೆಯಲ್ಲಿ ಪಾಲ್ಗೊಂಡು ಚಾಂಪಿಯನ್ ಆಗಿದ್ದಾರೆ. ಈಕೆ ಅಂತರಾಷ್ಟಿçÃಯ ಸ್ಪರ್ಧೆಯಲ್ಲಿ ಭಾಗವಹಿಸಿದ ಮಡಿಕೇರಿ ಕೇಂದ್ರದ ಪ್ರಥಮ ವಿದ್ಯಾರ್ಥಿನಿಯಾಗಿದ್ದಾಳೆ ಎಂದು ತಿಳಿಸಿದರು.

ಮಡಿಕೇರಿಯ ಬ್ರೈನೋಬ್ರೈನ್ ಕೇಂದ್ರದ ಮುಖ್ಯಸ್ಥರಾದ ಮಾಪಂಗಡ ಕವಿತಾ ಕರುಂಬಯ್ಯ ಅವರು ಮಾತನಾಡಿ ಮಕ್ಕಳಲ್ಲಿ ಸ್ಮರಣ ಶಕ್ತಿ, ಕಲ್ಪನಾ ಶಕ್ತಿ, ಆತ್ಮವಿಶ್ವಾಸ, ಚುರುಕುತನ, ಬಹುಕಾರ್ಯ ಕೌಶಲ್ಯ, ಛಾಯಾಗ್ರಹಣ ಶಕ್ತಿ ಹೆಚ್ಚಾಗುವುದರೊಂದಿಗೆ ಮಕ್ಕಳ ಕನಸಿಗೆ ರೆಕ್ಕೆ ಸಿಕ್ಕಂತಾಗಿದೆ ಎಂದರು. ಅಭಿಪ್ರಾಯ ಹಂಚಿಕೊಂಡ ವಿದ್ಯಾರ್ಥಿಗಳು ಅಬಾಕಸ್ ಕುರಿತು ಮೆಚ್ಚುಗೆಯ ಮಾತುಗಳನ್ನಾಡಿದರು.

ಕಾರ್ಯಕ್ರಮದಲ್ಲಿ ಪಶುಸಂಗೋಪನಾ ಇಲಾಖೆಯ ನಿವೃತ್ತ ಉಪನಿರ್ದೇಶಕ ಕನ್ನಂಡ ಡಾ.ಅಯ್ಯಪ್ಪ ಹಾಗೂ ಮಾಪಂಗಡ ಮೋಹನ್ ಕರುಂಬಯ್ಯ ಅವರು ಕೊಡಗಿನ ಸಾಂಪ್ರಾದಾಯಿಕ ಸ್ಮರಣಿಕೆೆಯನ್ನು ನೀಲ್ ಕಮಾಲ್ ಸ್ವರ್ಣಕರ್ ಅವರಿಗೆ ನೀಡಿ ಗೌರವಿಸಿದರು. ಕೇಂದ್ರದ ವಿದ್ಯಾರ್ಥಿಗಳು ಪ್ರಾರ್ಥಿಸಿದರು.

ವಿದ್ಯಾರ್ಥಿಗಳಿಂದ ನಡೆದ ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮಗಳು ಗಮನ ಸೆಳೆದವು. ಕಾರ್ಯಕ್ರಮದಲ್ಲಿ ನುಷ್ಕ ಕೊಡಂದೇರ, ಪುನಿತ.ಪಿ.ಎಂ, ಪ್ರತ್ಯುಷ.ಎಂ.ಸುವರ್ಣ, ಹವಿಂತ.ಹೆಚ್.ಎಸ್, ಯೋಣಿತ್ ಬೋಪಯ್ಯ ಎಂ.ಟಿ, ಚೇತಸ್ ಹೆಚ್.ಜೆ, ಐಶ್ವರ್ಯ.ಎಸ್., ಅಮೂಲ್ಯ.ಎಲ್, ಆರವ್ ಬೋಪಣ್ಣ.ಬಿ.ಎಂ, ತನ್ಮಯ್.ಬಿ.ಎಸ್, ಸುಭಾಷ್.ಬಿ.ಎನ್, ಲಾಸ್ಯ ಕೆ.ಸಿ, ಲಕ್ಷ್ಯ.ಕೆ.ಸಿ, ಕೃಪ.ಆರ್, ರೂಪಲ್ ಮುತ್ತಮ್ಮ ಎಂ.ಎಲ್, ಧೃತಿ ಜೆ.ಪೂಜಾರಿ, ಧ್ರುವನ್.ಎ.ಎಂ., ಧೃತಿ.ಎ.ಎಂ, ಪ್ರಣತಿ.ಎಸ್.ಪಿ, ರಕ್ಷ್ ಪೊನ್ನಣ್ಣ.ಬಿ.ಪಿ, ಚಿರಂತನ ಆರ್.ಕಾಮತ್, ಚಾರ್ವಿ.ಕೆ.ಟಿ. ಭಾಗವಹಿಸಿದ್ದರು