ಮಡಿಕೇರಿ (Madikeri) ಕುಟ್ಟ ಹೆದ್ದಾರಿ ಸಂ-89ರ ಕಿ.ಮೀ. 80.40 ರಲ್ಲಿನ (ಮಂಚಳ್ಳಿ ಗ್ರಾಮ, ಶ್ರೀಮಂಗಲ ಹೋಬಳಿ) ರಸ್ತೆ ಭಾಗದಲ್ಲಿ ಮಳೆಹಾನಿ ಕಾಮಗಾರಿ ಕೈಗೊಳ್ಳುವ ನಿಟ್ಟಿನಲ್ಲಿ ಸಾರ್ವಜನಿಕ ಹಿತಾಸಕ್ತಿಯಿಂದ ಏಪ್ರಿಲ್, 08 ರಿಂದ ಮೇ, 10 ರವರೆಗೆ ಪೊನ್ನಂಪೇಟೆ ತಾಲ್ಲೂಕು ಮಡಿಕೇರಿ ಕುಟ್ಟ ಹೆದ್ದಾರಿ ಸಂ.89ರ ಕಿ.ಮೀ.80.40 ರಲ್ಲಿನ(ಮಂಚಳ್ಳಿ ಗ್ರಾಮ, ಶ್ರೀಮಂಗಲ ಹೋಬಳಿ) ರಸ್ತೆ ಮಾರ್ಗದಲ್ಲಿ ಮುಂಜಾಗ್ರತಾ ಕ್ರಮವಾಗಿ ಎಲ್ಲಾ ರೀತಿಯ ವಾಹನಗಳ (Vehicle) ಸಂಚಾರವನ್ನು ನಿರ್ಬಂಧಿಸಿ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ದಂಡಾಧಿಕಾರಿ ವೆಂಕಟ್ ರಾಜಾ ಅವರು ಆದೇಶಿಸಿದ್ದಾರೆ. ಸಾರ್ವಜನಿಕರು ಶ್ರೀಮಂಗಲ-ನಾಲ್ಕೇರಿ ಜಿಲ್ಲಾ ಮುಖ್ಯ ರಸ್ತೆಯ ಮುಖಾಂತರ (6 ಕಿ.ಮೀ), ಕಾಕೂರು -ಹೆರ್ಮಾಡು-ಬೊಳ್ಳರಿಗೇಟ್ ಜಿಲ್ಲಾ ಮುಖ್ಯ ರಸ್ತೆಯ ಮುಖಾಂತರ(6.90 ಕಿ.ಮೀ.) ಮಾರ್ಗವನ್ನು ಬಳಸಬಹುದು.
ವಿರಾಜಪೇಟೆ (Virajpet) ತಾಲೂಕಿನ ವಿರಾಜಪೇಟೆ-ಕರಡ ಜಿಲ್ಲಾ ಮುಖ್ಯರಸ್ತೆಯ ಕಿ.ಮೀ.16.40ರಲ್ಲಿ (ಸರಪಳಿ 16.40 ಕಿ.ಮೀ ತೋರ ಹತ್ತಿರ) ರಸ್ತೆ ಭಾಗದಲ್ಲಿ ಮಳೆಹಾನಿ ಕಾಮಗಾರಿ ಕೈಗೊಳ್ಳುವ ನಿಟ್ಟಿನಲ್ಲಿ ಸಾರ್ವಜನಿಕ ಹಿತಾಸಕ್ತಿಯಿಂದ, ಏಪ್ರಿಲ್,08 ರಿಂದ ಮೇ, 10 ರವರೆಗೆ ವಿರಾಜಪೇಟೆ ತಾಲ್ಲೂಕಿನ ವಿರಾಜಪೇಟೆ-ಕರಡ ಜಿಲ್ಲಾ ಮುಖ್ಯ ರಸ್ತೆಯ ತೆರಮೆಮೊಟ್ಟಿಯ 16.40 ಕಿ.ಮೀ.ರಲ್ಲಿ (ತೋರ ಹತ್ತಿರ) ರಸ್ತೆ ಭಾಗದಲ್ಲಿ ಮುಂಜಾಗ್ರತಾ ಕ್ರಮವಾಗಿ ಎಲ್ಲಾ ರೀತಿಯ ವಾಹನಗಳ ಸಂಚಾರವನ್ನು ನಿರ್ಬಂಧಿಸಿ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ದಂಡಾಧಿಕಾರಿ ವೆಂಕಟ್ ರಾಜಾ ಅವರು ಆದೇಶಿಸಿದ್ದಾರೆ.
ಸಾರ್ವಜನಿಕರು ತೋರ-ಕೆದಮುಳ್ಳೂರು-ಬೋಯಿಕೇರಿ ಕಡೆಯಿಂದ ವಿರಾಜಪೇಟೆ 10.30ಕಿ.ಮೀ. ದೂರವಿರುತ್ತದೆ. ತೋರ-ಹೆಗ್ಗಳ-ಆರ್ಜಿ ಕಡೆಯಿಂದ ವಿರಾಜಫೇಟೆಗೆ 19.40 ಕಿ.ಮೀ. ದೂರವಿರುತ್ತದೆ ಈ ಮಾರ್ಗವನ್ನು ಬಳಸಬಹುದು.
ಈ ಬಗ್ಗೆ ಮೋಟಾರ್ ವಾಹನ ಕಾಯ್ದೆ 1988 ರ ಸೆಕ್ಷನ್ 116 ಹಾಗೂ ಕರ್ನಾಟಕ ಮೋಟಾರ್ ವಾಹನ ನಿಯಮಗಳು 1989 ರ (ತಿದ್ದುಪಡಿ ನಿಯಮಗಳು 1990) ನಿಯಮ 221ಎ(2) ರಂತೆ ಅವಶ್ಯವಿರುವ ಸಂಜ್ಞೆ/ ಸೂಚನಾ ಫಲಕವನ್ನು ಅಳವಡಿಸಲು ಕಾರ್ಯಪಾಲಕ ಎಂಜಿನಿಯರ್, ಲೋಕೋಪಯೋಗಿ ಇಲಾಖೆ, ಕೊಡಗು ವಿಭಾಗ, ಮಡಿಕೇರಿ ಇವರಿಗೆ ಸೂಚನೆ ನೀಡಲಾಗಿದೆ ಎಂದು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ದಂಡಾಧಿಕಾರಿ ವೆಂಕಟ್ ರಾಜಾ ಅವರು ತಿಳಿಸಿದ್ದಾರೆ.