ಕತ್ತಲೆಕಾಡು ವಿನಾಯಕ ಸೇವಾ ಟ್ರಸ್ಟ್ ವತಿಯಿಂದ ಶ್ರೀರಾಮ ನವಮಿ ಆಚರಣೆ

Share this post :

coorg buzz

ಮಡಿಕೇರಿ : ಕತ್ತಲೆಕಾಡು ಶ್ರೀ ವಿನಾಯಕ ಸೇವಾ ಟ್ರಸ್ಟ್ ವತಿಯಿಂದ ಶ್ರೀ ರಾಮನವಮಿಯನ್ನು ಸಂಭ್ರಮದಿಂದ‌ ಆಚರಿಸಲಾಯಿತು.
ಟ್ರಸ್ಟ್ ಆವರಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಟ್ರಸ್ಟ್ ಸದಸ್ಯರು, ವಿದ್ಯಾರ್ಥಿಗಳು, ಗ್ರಾಮಸ್ಥರು ಭಾಗಿಯಾಗಿದ್ದರು. ಮಹಿಳೆಯರು ಆವರಣದಲ್ಲಿ ದೀಪ ಬೆಳಗಿದರು. ಬಳಿಕ ಶ್ರೀರಾಮನಿಗೆ ಸಾಮೂಹಿಕವಾಗಿ ಆರತಿ ಬೆಳಗಲಾಯಿತು.
ಟ್ರಸ್ಟ್‌ನ ವಿದ್ಯಾರ್ಥಿ ಘಟಕದ ಸದಸ್ಯರು ಭಜನೆ ಕಾರ್ಯಕ್ರಮ ನಡೆಸಿಕೊಟ್ಟರು. ಮಡಿಕೇರಿಯ ಶ್ರೀ ರಾಮಾಂಜನೇಯ ಭಜನಾ ತಂಡದ ಸುರೇಶ್ ಮಾವಟ್ಕರ್ ಅವರು ವಿದ್ಯಾರ್ಥಿಗಳಿಗೆ ಮಾರ್ಗದರ್ಶನ‌ ಮಾಡಿದರು. ರಾಮನವಮಿಯನ್ನು ದೇಶದೆಲ್ಲೆಡೆ ಹಿಂದುಗಳು ಸಡಗರ, ಸಂಭ್ರಮದಿಂದ ಆಚರಿಸುತ್ತಾರೆ. ಮರ್ಯಾದ ಪುರುಷೋತ್ತಮ ಜನ್ಮ ದಿನವನ್ನು ಹಳ್ಳಿ ಹಳ್ಳಿಯಲ್ಲೂ ಸಂಭ್ರಮಿಸುತ್ತಿರುವುದು ಖುಷಿಯ ವಿಚಾರ ಎಂದು ಅನಿಸಿಕೆ ವ್ಯಕ್ತಪಡಿಸಿದರು.
ಪೂಜೆ ಬಳಿಕ ಪಾನಕ ಹಾಗೂ ಲಘು ಉಪಹಾರ ವಿತರಿಸಲಾಯಿತು. ಟ್ರಸ್ಟ್ ಅಧ್ಯಕ್ಷ ಹೊನ್ನಪ್ಪ ಆಚಾರ್ಯ, ಕಾರ್ಯದರ್ಶಿ ಬ್ರಿಜೇಶ್ ರೈ, ಗಣೇಶೋತ್ಸವ ಸಮಿತಿ ಅಧ್ಯಕ್ಷ ಸುರೇಶ್, ಮಹಿಳಾ ಘಟಕದ ಅಧ್ಯಕ್ಷೆ ಪುಷ್ಪ ಹಾಗೂ ಸದಸ್ಯರು ಇದ್ದರು.

 

I