ಹುಲಿತಾಳ ಕ್ರಿಕೆಟ್ ಪ್ರೀಮಿಯರ್ ಲೀಗ್: ಟೀಮ್ ವಿರಾಟ್ಸ್ ಚಾಂಪಿಯನ್

Hulitala Cricket Premier League

Share this post :

ಮಡಿಕೇರಿ: ಮಡಿಕೇರಿಯಲ್ಲಿ ಫ್ರೆಂಡ್ಸ್ ಹುಲಿತಾಳ (Hulitala) ಇವರ ವತಿಯಿಂದ ಪ್ರಥಮ ವರ್ಷದ ಕ್ರಿಕೆಟ್ ಲೀಗ್ (Cricket League) ಪಂದ್ಯದಲ್ಲಿ ಟೀಮ್ ವಿರಾಟ್ಸ್ ಚಾಂಪಿಯನ್ ಆಗಿ ಹೊರಹೊಮ್ಮಿದರೆ ಟ್ಯಾಂಗೋ ಬಾಯ್ಸ್ ರನ್ನರ್ಸ್ ಸ್ಥಾನಕ್ಕೆ ತೃಪ್ತಿ ಪಟ್ಟುಕೊಂಡಿತು, ಹಾಗೆಯೆ 3 ಹಾಗೂ 4 ಸ್ಥಾನವನ್ನು ಟೀಮ್ ಶೀಲ್ಡ್ ಮೇಕೇರಿ ಹಾಗೂ ಪ್ರವೀತ್ ಕ್ರಿಕೆಟರ್ಸ್ ಮರಗೋಡು ಪಡೆದುಕೊಂಡಿತು, ನಗರದ ಮ್ಯಾನ್ಸ್ ಕಾಂಪೌಂಡ್ ಮೈದಾನದಲ್ಲಿ ನಡೆದ ಹುಲಿತಾಳ ಕ್ರಿಕೆಟ್ ಪ್ರೀಮಿಯರ್ ಲೀಗ್ ಪಂದ್ಯದಲ್ಲಿ ಒಟ್ಟು ಹತ್ತು ತಂಡಗಳು ಚಾಂಪಿಯನ್ ಟ್ರೋಫಿಗಾಗಿ ಸೆಣಸಾಡಿದವು.

ಮೊದಲು ನಡೆದ ಮೊದಲ ಕ್ವಾಲಿಫಯರ್ ಪಂದ್ಯದಲ್ಲಿ ಟೀಮ್ ಶೀಲ್ಡ್ ವಿರುದ್ಧ ಟೀಮ್ ವಿರಾಟ್ಸ್ 9 ವಿಕೆಟ್ ಗಳ ಜಯ ಸಾದಿಸಿ ನೇರವಾಗಿ ಫೈನಲ್ ಗೆ ಅರ್ಹತೆ ಪಡೆದುಕೊಂಡಿತು.ಎಲಿಮಿನೇಟರ್ ಪಂದ್ಯವು ಟ್ಯಾಂಗೋ ಬಾಯ್ಸ್ ಹಾಗೂ ಪ್ರವೀತ್ ಕ್ರಿಕೆಟರ್ಸ್ ಮರಗೋಡು ಇದರ ನಡುವೆ ನಡೆದ ಪಂದ್ಯದಲ್ಲಿ ಟ್ಯಾಂಗೋ ಬಾಯ್ಸ್ ಭರ್ಜರಿ 46 ರನ್ ಗಳ ಜಯ ಸಾದಿಸಿ ಕ್ವಾಲಿಫಯರ್ ಗೆ ಲಗ್ಗೆ ಇಟ್ಟಿತು.

ದ್ವಿತೀಯ ಕ್ವಾಲಿಫಯರ್ ಪಂದ್ಯವು ಟೀಮ್ ಶೀಲ್ಡ್ ಹಾಗೂ ಟ್ಯಾಂಗೋ ಬಾಯ್ಸ್ ನಡುವೆ ನಡೆದ ರೋಚಕ ಹಣಹಣಿಯಲ್ಲಿ ಟ್ಯಾಂಗೋ ಬಾಯ್ಸ್ ತಂಡವು 8 ವಿಕೆಟ್ ಗಳ ಜಯ ಸಾದಿಸಿ ಫೈನಲ್ ಗೆ ದ್ವಿತೀಯ ಅರ್ಹತೆ ಪಡೆದುಕೊಂಡಿತು.ಫೈನಲ್ ಪಂದ್ಯವು ಟೀಮ್ ವಿರಾಟ್ಸ್ ಹಾಗೂ ಟ್ಯಾಂಗೋ ಬಾಯ್ಸ್ ತಂಡದ ನಡುವೆ ನಡೆದ ರೋಚಕ ಫೈನಲ್ ಪಂದ್ಯದಲ್ಲಿ ಟೀಮ್ ವಿರಾಟ್ಸ್ ತಂಡವು ಟ್ಯಾಂಗೋ ಬಾಯ್ಸ್ ವಿರುದ್ಧ 27 ರನ್ ಗಳ ಜಯ ಸಾದಿಸಿ ಹುಲಿತಾಳ ಕ್ರಿಕೆಟ್ ಪ್ರೀಮಿಯರ್ ಲೀಗ್ ಸೀಸನ್-1ರ ಚಾಂಪಿಯನ್ ಪಟ್ಟ ಅಲಂಕರಿಸಿತು.

ಕ್ರೀಡಾಕೂಟದಲ್ಲಿ ಉತ್ತಮ ಬ್ಯಾಟ್ಸ್ ಮೆನ್ ಆಗಿ ಟೀಮ್ ವಿರಾಟ್ಸ್ ತಂಡದ ಮೂರ್ತಿ ಪಡೆದು ಕೊಂಡರೆ ಉತ್ತಮ ಆಲ್ ರೌಂಡರ್ ಪ್ರಶಸ್ತಿಯನ್ನು ಟ್ಯಾಂಗೋ ಬಾಯ್ಸ್ ತಂಡದ ಶಿವು ಪಡೆದು ಕೊಂಡರು, ಬೆಸ್ಟ್ ಕ್ಯಾಚ್ ಪ್ರಶಸ್ತಿಯನ್ನು ಶ್ರೀ ಕುಶಾನಿ ಕ್ರಿಕೆಟರ್ಸ್ ತಂಡದ ಫಿರೋಜ್ ಪಡೆದು ಕೊಂಡರೆ , ಕ್ರೀಡಾ ಕೂಟದ ಉದಯೋನ್ಮೋಕ ಪ್ರಶಸ್ತಿಯನ್ನು ವಿರಾಟ್ಸ್ ತಂಡದ ಅಕ್ಷಯ್ ಹಾಗೂ ರೈಡರ್ಸ್ ತಂಡದ ನಿತಿನ್ ಪಡೆದರೆ, ಉತ್ತಮ ಬೌಲರ್ ಪ್ರಶಸ್ತಿಯನ್ನು ಪ್ರಶಸ್ತಿಯನ್ನು ಟ್ಯಾಂಗೋ ಬಾಯ್ಸ್ ತಂಡದ ಯತೀಶ್ ಪಡೆದರೆ ಕ್ರೀಡಾ ಕೂಟದ ಸರಣಿ ಪುರುಷೋತ್ತಮ ಪ್ರಶಸ್ತಿ ಯನ್ನು ಟೀಮ್ ವಿರಾಟ್ಸ್ ತಂಡದ ಮೂರ್ತಿ ಪಡೆದು ಕೊಂಡರು.

ಕ್ರೀಡಾ ಕೂಟಕ್ಕೆ ತೀರ್ಪುಗಾರಿಕಯಾಗಿ ರಮೇಶ್ ಹೆಬ್ಬಟ್ಟಗೇರಿ, ಮಂಜು ಕುಶಾಲನಗರ, ಸಚಿನ್ ಬೇಲೂರ್, ಹೇಮಂತ್ ಮಾದಪುರ, ವಿಜೇತ್ ಕಡಗದಾಳು, ರಂಜು ಚೆರಂಬಾಣೆ, ಕಾರ್ಯನಿರ್ವಹಿಸಿದರೆ,. ವೀಕ್ಷಕ ವಿವರಣೆಯನ್ನು ಹಾಕತ್ತುರುವಿನ ಶಿಯಾಬ್, ಕಡಗದಾಳುವಿನ ಪ್ರೇಮ್ ಹಾಗೂ ಮರಗೋಡುವಿನ ಪ್ರದೀಪ್ ನಡೆಸಿಕೊಟ್ಟರು, ಕ್ರೀಡಾ ಕೂಟದ ಬಹುಮಾನ ವಿತರಣೆ ಸಂದರ್ಭ, ಹುಲಿತಾಳ ಕ್ರಿಕೆಟ್ ಚಾಂಪಿಯನ್ ಲೀಗ್ ನ ಎಲ್ಲಾ ಆಯೋಜಕರು ಉಪಸ್ಥಿತರಿದ್ದರು.

✍️ ಅಶೋಕ್ ಮಡಿಕೇರಿ