Health Tips: ಮಹಿಳೆಯರಿಗಿರಬೇಕು ಆರೋಗ್ಯ ಕಾಳಜಿ!

Health Tips

Share this post :

ಹಿಂದಿನ ಕಾಲದಿಂದಲೂ ಮಹಿಳೆಯರು ಮನೆಯ ಸದಸ್ಯರ ಆರೋಗ್ಯದ ಪಾಲನೆ ಮತ್ತು ಪೋಷಣೆಯ ಜವಾಬ್ದಾರಿ ವಹಿಸಿಕೊಂಡಿದ್ದಾರೆ. ಆದರೆ ತನ್ನ ಆರೋಗ್ಯದ ಬಗ್ಗೆ ನಿರ್ಲಕ್ಷ್ಯ ತೋರುತ್ತಿರುವುದುನ್ನು ಬಿಡಬೇಕು ಹಾಗಾದಾಗ ಮಾತ್ರ ಆರೋಗ್ಯವಂತರಾಗಿ ಬದುಕಲು ಸಾಧ್ಯ ಮತ್ತು ಉತ್ತಮ ಜೀವನಶೈಲಿಯನ್ನು ಹೊಂದಲು ಸಾಧ್ಯ ಎಂದು ಬೆಂಗಳೂರಿನ ವಾಸವಿ ಆಸ್ಪತ್ರೆಯ ಪ್ರಸೂತಿ ತಜ್ಞರಾದ ಡಾ. ನಿಶಾ ಬುಚಾಡೆ ಅವರ ಆರೋಗ್ಯ ಸಲಹೆಗಳು (Health Tips) ಇಲ್ಲಿದೆ.

* ಅಡುಗೆ ಮಾಡುವುದು, ಮಕ್ಕಳ ಪಾಲನೆ ಜೊತೆಗೆ ಮನೆಯ ಕೆಲಸದ ಒತ್ತಡ ನಡುವೆ ಸರಿಯಾದ ಸಮಯಕ್ಕೆ ಆಹಾರ ಸೇವನೆ ಮಾಡುವ ಅಗತ್ಯವಿದೆ. ಆಹಾರ ಸೇವನೆ ಜೊತೆಗೆ ಸಮತೋಲಿತ ಆಹಾರ ಸೇವನೆ ಮಾಡುವ ಅವಶ್ಯಕತೆ ಇದೆ.

* ಸೇವಿಸುವ ಆಹಾರದಲ್ಲಿ ಶೇಕಡಾ 50ರಷ್ಟು ಕಾರ್ಬೋಹೈಡ್ರೇಟ್ಸ್, 30ರಷ್ಟು ಪ್ರೋಟಿನ್, ಮತ್ತು ಶೇಕಡಾ 20ರಷ್ಟು ಕೊಬ್ಬು ಇರಬೇಕು. ಸರಿಯಾದ ಸಮಯಕ್ಕೆ ಬೆಳಗ್ಗಿನ ತಿಂಡಿ, ಮಧ್ಯಾನದ ಊಟ, ರಾತ್ರಿ ಊಟ ಮಾಡಬೇಕು.

* ಇಂದಿನ ದಿನಗಳಲ್ಲಿ ಭಾರತೀಯ ಮಹಿಳೆಯರು ಪ್ರೋಟಿನ್ ಹಾಗೂ ನ್ಯೂಟ್ರಿಶಿಯನ್ ಕೊರತೆಯಿಂದ ಬಳಲುತ್ತಿದ್ದಾರೆ. ದಿನಕ್ಕೆ 3-4 ಲೀಟರ್ ನೀರು ಕುಡಿಯದೆ ಇರುವುದರಿಂದ ನಿರ್ಜಲೀಕರಣದಿಂದ ಬಳಲುತ್ತಿದ್ದಾರೆ. ಅದರಲ್ಲೂ ಮುಖ್ಯವಾಗಿ ಬೇಸಿಗೆಯಲ್ಲಿ ಈ ರೀತಿಯ ಸವಾಲುಗಳನ್ನು ಎದುರಿಸುತ್ತಿದ್ದಾರೆ.

* ಮಹಿಳೆಯರು ಕಾಲ ಕಾಲಕ್ಕೆ ತಕ್ಕಂತೆ ಸಿಗುವ ಹಣ್ಣು ಮತ್ತು ತರಕಾರಿಗಳನ್ನು ತಿನ್ನುವ ಅಭ್ಯಾಸ ಮಾಡಿಕೊಳ್ಳಬೇಕು. ಹಾಗೆಯೇ ಉತ್ತಮ ಡಯಟ್ ಕ್ರಮವನ್ನು ರೂಢಿಸಿಕೊಳ್ಳಬೇಕು. ಹೀಗೆ ಮಾಡುವುದರಿಂದ ಉತ್ತಮ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು ಎಂದು ಡಾ. ನಿಶಾ ಬಚಾಡೆ ತಿಳಿಸಿದರು.

* ಮನೆ ಕೆಲಸದಲ್ಲಿ ತೊಡಗಿರುವ ಮಹಿಳೆಯರು ದಿನನಿತ್ಯ ವ್ಯಾಯಾಮ ಮಾಡುವುದನ್ನು ರೂಢಿಸಿಕೊಳ್ಳಬೇಕು. ವಾರದಲ್ಲಿ ಕನಿಷ್ಟ ಐದು ದಿನವಾದರೂ ವ್ಯಾಯಾಮ ಮಾಡುವುದು, ಯೋಗ ಸೇರಿದಂತೆ ಯಾವುದೇ ದೈಹಿಕ ಕಸರತ್ತು ಮಾಡುವ ಅನಿವಾರ್ಯತೆ ಇದೆ ಎಂದರು.

* ಇದೆಲ್ಲದಕ್ಕಿಂತ ಮುಖ್ಯವಾಗಿ ವಾರ್ಷಿಕವಾಗಿ ಆರೋಗ್ಯ ತಪಾಸಣೆ ಮಾಡಿಸಿಕೊಳ್ಳುವುದರಿಂದ ಆರೋಗ್ಯ ಸಮಸ್ಯೆಗಳನ್ನು ಆರಂಭದಲ್ಲಿಯೇ ನಿಯಂತ್ರಿಸಬಹುದು ಎಂದು ಡಾ. ನಿಶಾ ಬುಚಾಡೆ ತಿಳಿಸಿದರು.