ಮಳಿಗೆಯಲ್ಲಿ ಶಾಪಿಂಗ್ ಮಾಡುವಾಗ, ಆನ್ ಲೈನ್ ನಲ್ಲಿ ಅಥವಾ ಪ್ರಯಾಣ ಮಾಡುವಾಗಲೇ ಇರಲಿ ಜನರು ಇಂದು ಹಣವನ್ನು ಡಿಜಿಟಲ್ ಮೂಲಕವೇ ಪಾವತಿ (Digital Payments) ಮಾಡುತ್ತಿದ್ದಾರೆ. ಈ ನಿಟ್ಟಿನಲ್ಲಿ ಸುರಕ್ಷಿತವಾಗಿ ಮತ್ತು ಬುದ್ಧಿವಂತಿಕೆಯಿಂದ ಪಾವತಿ ಮಾಡುವುದು ಮುಖ್ಯವಾದ್ದರಿಂದ ಈ ಸಲದ ಡಿಜಿಟಲ್ ಪಾವತಿ ಜಾಗೃತಿ ಸಪ್ತಾಹ ಸಂದರ್ಭದಲ್ಲಿ ವೀಸಾ ನೀಡುತ್ತಿರುವ ಸಲಹೆಗಳು ಇಲ್ಲಿದೆ.
* ಸುರಕ್ಷಿತ ಸಂಪರ್ಕರಹಿತ ಪಾವತಿಗಾಗಿ ಫೋನ್ ನಲ್ಲಿ ಕಾರ್ಡ್ ಗಳನ್ನು ಸೇವ್ ಮಾಡಿ: ಬ್ಯಾಂಕಿಂಗ್ ಮತ್ತು ಪಾವತಿ ಆಪ್ ಗಳಲ್ಲಿ ನಿಮ್ಮ ಕಾರ್ಡ್ ವಿವರಗಳನ್ನು ಸೇರಿಸಿ. ಈ ಮೂಲಕ ಫೋನ್ ಅನ್ನು ಟ್ಯಾಪ್ ಮಾಡಿ ಕಾರ್ಡ್ ಬಳಸಿ ಪಾವತಿ ಮಾಡಬಹುದು.
* ಸಂಪರ್ಕರಹಿತ ಕಾರ್ಡ್ ಬಳಸಿ: ಇಎಂವಿಸಿಓ® ಚಿಪ್ ಇರುವ ಸಂಪರ್ಕರಹಿತ ಕಾರ್ಡ್ ಗಳ ಮೂಲಕ (ಕಾರ್ಡ್ ಮೇಲೆ ವೈ-ಫೈ ತರಹದ ಚಿಹ್ನೆ ಇರುತ್ತದೆ) ಪಿಓಎಸ್ ಟರ್ಮಿನಲ್ ನಲ್ಲಿ ಕಾರ್ಡ್ ಟ್ಯಾಪ್ ಮಾಡಿ ನಿಮ್ಮ ಕಾರ್ಡ್ ಅನ್ನು ನಿಮ್ಮ ಕೈಯಲ್ಲೇ ಹಿಡಿದುಕೊಂಡು ತ್ವರಿತವಾಗಿ ಮತ್ತು ಸುರಕ್ಷಿತವಾಗಿ ಪಾವತಿ ಮಾಡಿ.
* ಯಾವಾಗಲೂ ಸುರಕ್ಷಿತ ಪಾವತಿ ವಿಧಾನಗಳನ್ನು ಬಳಸಿ: ವಂಚನೆ ತಡೆಯಲು ಹೆಚ್ಚುವರಿ ಎನ್‌ಕ್ರಿಪ್ಶನ್, ಬಯೋಮೆಟ್ರಿಕ್ ದೃಢೀಕರಣ ಮತ್ತು ಟೋಕನೈಸೇಶನ್ ವ್ಯವಸ್ಥೆ ಇರುವ ಸುರಕ್ಷಿತ ಡಿಜಿಟಲ್ ಪಾವತಿ ವಿಧಾನಗಳನ್ನು ಆರಿಸಿಕೊಳ್ಳಿ.
* ಬ್ಯಾಂಕಿಂಗ್ ಆಪ್ ಗಳ ಮೂಲಕ ವಹಿವಾಟು ನಡೆಸುವುದನ್ನು ನಿಯಂತ್ರಿಸಿ: ಸಂಪರ್ಕರಹಿತ, ಇ-ಕಾಮರ್ಸ್, ಎಟಿಎಂ ವಿತ್ ಡ್ರಾವಲ್ ಮತ್ತು ಅಂತರರಾಷ್ಟ್ರೀಯ ಕಾರ್ಡ್ ವಹಿವಾಟುಗಳನ್ನು ಬ್ಯಾಂಕಿಂಗ್ ಆಪ್ ನಲ್ಲಿ ಸುಲಭವಾಗಿ ಆನ್ ಅಥವಾ ಆಫ್ ಮಾಡಿ. ನೀವು ಎಷ್ಟು ಖರ್ಚು ಮಾಡಬೇಕು ಎಂಬ ಮಿತಿಯನ್ನು ನಮೂದಿಸಬಹುದು ಮತ್ತು ಕಾರ್ಡ್ ಎಲ್ಲಿ, ಹೇಗೆ ಬಳಸಬೇಕು ಎಂಬುದನ್ನೂ ಸೆಟ್ ಮಾಡಬಹುದು.
* ತಕ್ಷಣವೇ ಬರುವ ಅಲರ್ಟ್ ಗಳ ಮೂಲಕ ವಹಿವಾಟುಗಳ ಮೇಲೆ ನಿಗಾ ಇಡಿ: ಪ್ರತೀ ಖರ್ಚಿನ ಕುರಿತು ತಿಳಿಯಲು ತಕ್ಷಣ ನೋಟಿಫಿಕೇಷನ್ ಬರುವ ವ್ಯವಸ್ಥೆಯನ್ನು ಬಳಸಿಕೊಳ್ಳಿ ಮತ್ತು ಬ್ಯಾಂಕಿಂಗ್ ಆಪ್ ಗಳಲ್ಲಿ ತಕ್ಷಣವೇ ಆಯಾ ವಹಿವಾಟುಗಳನ್ನು ಪರಿಶೀಲಿಸಿ.
* ಕ್ರೆಡಿಟ್ ಕಾರ್ಡ್ ಪಾವತಿಯ ಲಾಭ ಪಡೆಯಿರಿ: ಬ್ಯಾಂಕ್ ಮತ್ತು ಪಾವತಿ ಸಂಸ್ಥೆಗಳಿಂದ ದೊರಕುವ ಕ್ಯಾಶ್ ಬ್ಯಾಕ್, ರಿವಾರ್ಡ್ ಪಾಯಿಂಟ್ ಗಳು ಮತ್ತು ವಿಶೇಷ ರಿಯಾಯಿತಿಗಳನ್ನು ಬಳಸಿ. ಇಎಂಐ ಆಯ್ಕೆಗಳು ಮತ್ತು ಶುಲ್ಕ ಮನ್ನಾಗಳನ್ನು ಬುದ್ಧಿವಂತಿಕೆಯಿಂದ ಬಳಸಿ ಪ್ರತೀ ವಹಿವಾಟಿನಲ್ಲಿ ಹೆಚ್ಚಿನ ಲಾಭ ಪಡೆಯಿರಿ.
ಈ ಸಲಹೆಗಳನ್ನು ಪಾಲಿಸಿಕೊಳ್ಳುವ ಮೂಲಕ ವೇಗವಾಗಿ, ಸುರಕ್ಷಿತವಾಗಿ ಮತ್ತು ಸುಲಭವಾಗಿ ಡಿಜಿಟಲ್ ಪಾವತಿ ಮಾಡಬಹುದು.