ಗೃಹಲಕ್ಷ್ಮಿ ಹಣ ಬೇಕಾದ್ರೆ ಹೀಗೆ ಮಾಡಿ: ಇಲ್ಲದಿದ್ರೆ ಬಂದ್!

Gruha Lakshmi Scheme

Share this post :

ಕಾಂಗ್ರೆಸ್‌ ಸರ್ಕಾರ ಜಾರಿ ಮಾಡಿರುವ ಮಹತ್ವಕಾಂಕ್ಷಿ ಗ್ಯಾರಂಟಿ ಯೋಜನೆಗಳಲ್ಲಿ ಗೃಹಲಕ್ಷ್ಮಿ ಕೂಡ ಒಂದಾಗಿದೆ. ಈ ಯೋಜನೆಯಡಿ ಮನೆ ಯಜಮಾನಿ ಖಾತೆಗೆ ಪ್ರತಿ ತಿಂಗಳು 2,000 ರೂಪಾಯಿ ಹಣ ಜಮಾ ಆಗುತ್ತೆ. ಇದರಿಂದ ರಾಜ್ಯಾದ್ಯಂತ ತುಂಬಾ ಮಹಿಳೆಯರಿಗೆ ಸಹಾಯವಾಗಿದ್ದು, ಉತ್ತಮ ಉದ್ದೇಶಗಳಿಗೆ ಬಳಕೆ ಮಾಡಿಕೊಂಡಿರುವ ಉದಾಹರಣೆಗಳಿವೆ. ಇದೀಗ ಈ ಹಣ ಖಾತೆಗೆ ಹಾಕಲು ಕೆಲವು ನಿಯಮಗಳನ್ನು ಮಾಡಲಾಗಿದೆ.

ಈ ಗೃಹಲಕ್ಷ್ಮಿ ಯೋಜನೆಯಲ್ಲಿನ (Gruha Lakshmi scheme) ತಾಂತ್ರಿಕ ತೊಂದರೆಗಳನ್ನು ಸರಿಪಡಿಸಲಾಗಿದೆ. ಯಾರೂ ಆತಂಕಪಡಿವ ಅಗತ್ಯ ಇಲ್ಲ. ಮಹಿಳೆಯರ ಖಾತೆಗೆ ಎರಡು ತಿಂಗಳ ಬಾಕಿ ಹಣ ಪಾವತಿ ಮಾಡಲಾಗುತ್ತದೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಅವರು ತಿಳಿಸಿದ್ದಾರೆ. ಆದರೆ ಎಲ್ಲಾ ಮಹಿಳೆಯರಿಗೆ ಹಣ ಸಿಗುವುದಿಲ್ಲ. ಈ ಕೆಳಗೆ ನೀಡಲಾಗಿರುವ ನಿಯಮ ಪಾಲನೆ ಮಾಡದವರಿಗೆ ಹಣ ಜಮಾ ಆಗುವುದಿಲ್ಲ ಎಂದು ತಿಳಿಸಿದೆ.

ಯಾರಿಗೆ ಸಿಗಲ್ಲ ಗೃಹಲಕ್ಷ್ಮಿ ಹಣ?
* ಕೆವೈಸಿ ಅಪ್ಡೇಟ್ ಮಾಡದವರು
* ಆಧಾರ್ ಲಿಂಕ್ ಇಲ್ಲದ ಬ್ಯಾಂಕ್‌ ಖಾತೆ
* ಪಾನ್ ಕಾರ್ಡ್ ಲಿಂಕ್ ಮಾಡದವರು
* ಮೊಬೈಲ್‌ ನಂಬರ್ ಲಿಂಕ್‌ ಇಲ್ಲದವರು
* NPCI ಮ್ಯಾಪಿಂಗ್ ಆಗಿಲ್ಲದವರು
* ಬಿಪಿಎಲ್‌ ಕಾರ್ಡ್‌ ಪಡಿತರ ಚೀಟಿ ರದ್ದಾದವರಿಗೆ

ಈ ದಾಖಲೆಗಳು ಅಪ್ಡೇಟ್‌ ಆಗಿಲ್ಲದಿದ್ದರೆ, ಗೃಹಲಕ್ಷ್ಮಿ ಹಣವನ್ನು ಪಡೆಯಲು ಅರ್ಹರಾಗಲ್ಲ ಎಂದು ತಿಳಿಸಿದ್ದಾರೆ. ಅಲ್ಲದೆ, ಯೋಜನೆಯಲ್ಲಿ ಕೆಲವು ಬದಲಾವಣೆಗಳನ್ನು ಮಾಡಲಾಗಿದೆ. ತೆರಿಗೆ ಪಾವತಿ ಮಾಡುವ ಮಹಿಳೆಯರಿಗೂ ಗೃಹಲಕ್ಷ್ಮೀ ಹಣ ಸಿಗುವುದಿಲ್ಲ. ಇನ್ನು ಬಡವರನ್ನು ಹೊರತುಪಡಿಸಿ ಯಾರೆಲ್ಲಾ ಅನುಕೂಲಸ್ಥರಿದ್ದರೆಯೋ ಅಂತಹವರು ಸ್ವತಃ ಈ ಯೋಜನೆ ಹಣ ಬೇಡ ಎಂದು ಬಿಡಬಹುದಾಗಿದೆ.

ರಾಜ್ಯ ಸರ್ಕಾರ DBT Karnataka App ಮೂಲಕ ನೇರವಾಗಿ ಫಲಾನುಭವಿಗಳ ಖಾತೆಗೆ ಹಣ ವರ್ಗಾವಣೆ ಆಗಿದ್ಯೋ ಇಲ್ಲವೋ ತಿಳಿಯಬುದು. ಮಹಿಳೆಯರು DBT Karnataka ಮೊಬೈಲ್‌ ಅಪ್ಲಿಕೇಶನ್‌ ಡೌನ್‌ಲೋಡ್‌ ಮಾಡಿಕೊಳ್ಳಿ ಮತ್ತು ನಿಮ್ಮ ಯೋಜನೆ ಸ್ಟೇಟಸ್‌ ಚೆಕ್‌ ಮಾಡಿ. ನಿಮ್ಮ ಬ್ಯಾಂಕ್‌ ಖಾತೆ ಅಪ್ಡೇಟ್‌ ಆಗಿಲ್ಲದಿದ್ದರೆ, ತಕ್ಷಣವೇ KYC, ಆಧಾರ್ ಲಿಂಕ್‌ ಮತ್ತು NPCI ಮ್ಯಾಪಿಂಗ್ ಮಾಡಿಸಿ. ಇಲ್ಲದಿದ್ದರೆ, ಹಣ ಜಮಾ ಆಗುವುದಿಲ್ಲ ಎಂದು ಸರ್ಕಾರ ಹೇಳಿದೆ.