ಮಡಿಕೇರಿ : ಕೊಡಗು ಗೌಡ ಯುವ ವೇದಿಕೆಯ ನೂತನ ಆಡಳಿತ ಮಂಡಳಿಯ ಸದಸ್ಯರು ಮಡಿಕೇರಿ ಕ್ಷೇತ್ರದ ಶಾಸಕ ಮಂತರ್ ಗೌಡರನ್ನು ಭೇಟಿಯಾಗಿ ಏಪ್ರಿಲ್ ತಿಂಗಳಲ್ಲಿ ನಡೆಯುವ ಕ್ರೀಟಕೂಟದ ಕುರಿತು ಚರ್ಚಿಸಿದರು.
ಅಧ್ಯಕ್ಷ ಬಾಳಾಡಿ ಮನೋಜ್ ನೇತೃತ್ವದಲ್ಲಿ ಶಾಸಕ ಮಂತರ್ ಗೌಡರನ್ನ ಕುಶಾಲನಗರದ ವಿಶ್ರಾಂತಿ ಗೃಹದಲ್ಲಿ ಭೇಟಿಯಾಗಿ ಕೊಡಗು ಗೌಡ ಯುವ ವೇದಿಕೆ ವತಿಯಿಂದ ನಡೆಯುವ ಒಲಂಪಿಕ್ ಮಾದರಿಯ ಕ್ರೀಡಾ ಕೂಟದ ಕುರಿತು ಚರ್ಚಿಸಲಾಯಿತು.
ಈ ಬಾರಿ ಕೊಡಗು ಗೌಡ ಯುವ ವೇದಿಕೆಯ ನೇತೃತ್ವದಲ್ಲಿ ಏಪ್ರೀಲ್ 27 ರಿಂದ ಮೇ 17 ರ ವರೆಗೆ ಗೌಡ ಸಮುದಾಯಗಳ ನಡುವೆ ಕುಟುಂಬವಾರು ಟೆನಿಸ್ ಬಾಲ್ ಕ್ರಿಕೆಟ್ ಹಾಗೂ ಮೊದಲ ವರ್ಷದ ರಿಂಕ್ ಹಾಕಿ, ಶೂಟಿಂಗ್, ಸಾಂಸ್ಕೃತಿಕ ಕಾರ್ಯಕ್ರಮ ವೈವಿಧ್ಯತೆಯ ಪೈಪೋಟಿ ಮಿಸ್ಟರ್ ಗೌಡ ಮಿಸ್ ಗೌಡತಿ ಸೇರಿದಂತೆ ವಿವಿಧ ರೀತಿಯ ಕಾರ್ಯಕ್ರಮಗಳನ್ನ ಮಡಿಕೇರಿಯ ಜಿಲ್ಲಾ ಕ್ರೀಡಾಂಗಣದಲ್ಲಿ ಆಯೋಜಿಸಲಾಗಿದೆ. ಇದಕ್ಕೆ ಶಾಸಕರ ಸಹಕಾರದ ಕುರಿತು ಮನವಿ ಮಾಡಲಾಯಿತು. ಇದಕ್ಕೆ ಸ್ಪಂದಿಸಿದ ಶಾಸಕರು ಕ್ರೀಡೆಯ ಜೊತೆಗೆ ಶಿಕ್ಷಣ ಕ್ಷೇತ್ರಕ್ಕೂ ಸಹಕಾರ ನೀಡುವಂತೆ ತಿಳಿಸಿದ್ದು ವೇದಿಕೆಯ ಮನವಿಗೆ ಸೂಕ್ತ ರೀತಿಯಲ್ಲಿ ಸ್ಪಂದಿಸುವ ಭರವಸೆ ನೀಡಿದ್ರು.
ಉಪಾಧ್ಯಕ್ಷ ಪರಿಚನ ಸತೀಶ್, ಕಾರ್ಯದರ್ಶಿ ಪುದಿಯನೆರವನ ರಿಷಿತ್ ಮಾದಯ್ಯ, ಕೆದಂಬಾಡಿ ಕಾಂಚನ, ಖಜಾಂಜಿ ನವೀನ್ ದೇರಳ, ಸಹ ಕಾರ್ಯದರ್ಶಿ ಸೋನಿ ಹಾಗೂ ಕವನ್ ಕೊತ್ತೋಳಿ, ಕ್ರೀಡಾಧ್ಯಕ್ಷ ಕುಟ್ಟನ ಪ್ರಶಾಂತ್, ಶಿಸ್ತು ಸಮಿತಿ ಅಧ್ಯಕ್ಷ ಪಟ್ಟಡ ದೀಪಕ್ ಹಾಗೂ ನಿರ್ದೇಶಕರಾದ ಅನುದೀಪ್ ಕಲ್ಲುಮುಟ್ಲು, ಜೈನಿರಾ ಲೋಹಿತ್, ಮುದಿಯಾರ್ ಗಣೇಶ್, ಪ್ರಚಾರ ಸಮಿತಿ ಮಾಗುಲು ಲೋಹಿತ್ ಹಾಗೂ ವಿನೋದ್ ಮೂಡಗದ್ದೆ ಉಪಸ್ಥಿತರಿದ್ದರು.



