ಬೆಟ್ಟಗೇರಿಯಲ್ಲಿ ಎ.ಎಸ್.ಪೊನ್ನಣ್ಣ ರಸ್ತೆ ಕಾಮಗಾರಿಗೆ ಚಾಲನೆ

Share this post :

ಮಡಿಕೇರಿ:- ತಾಲೂಕಿನ ಬೆಟ್ಟಗೇರಿಯಲ್ಲಿ ಶಾಸಕರ ವಿಶೇಷ ಅನುದಾನದಲ್ಲಿ ನಿರ್ಮಾಣವಾಗುತ್ತಿರುವ ಕಾಂಕ್ರೀಟ್ ರಸ್ತೆ ಕಾಮಗಾರಿಗೆ ವಿರಾಜಪೇಟೆ ವಿಧಾನಸಭಾ ಕ್ಷೇತ್ರದ ಶಾಸಕರು ಹಾಗೂ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರಾದ ಎ.ಎಸ್.ಪೊನ್ನಣ್ಣ ಅವರು ಭೂಮಿ ಪೂಜೆ ನೆರವೇರಿಸುವ ಮೂಲಕ ಚಾಲನೆ ನೀಡಿದರು. ಕೆಆರ್‍ಐಡಿಎಲ್ ಸಂಸ್ಥೆ ಮೂಲಕ ವಿರಾಜಪೇಟೆ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ 40 ಕೋಟಿ ವೆಚ್ಚದಲ್ಲಿ ಒಟ್ಟು 252 ಕಾಮಗಾರಿಗಳನ್ನು ಎ.ಎಸ್.ಪೊನ್ನಣ್ಣ ಅವರು ಜನರ ಕೋರಿಕೆಯ ಮೇರೆಗೆ ಗುರುತಿಸಿ ಅನುದಾನದ ಹಂಚಿಕೆ ಮಾಡಿದ್ದಾರೆ.

ಕ್ಷೇತ್ರದ ಕಟ್ಟಕಡೆಯ ವ್ಯಕ್ತಿಗೂ ಮೂಲಭೂತ ವ್ಯವಸ್ಥೆ ದೊರಕಬೇಕು ಎಂಬ ಆಶಯದೊಂದಿಗೆ ಆದ್ಯತೆ ಮೇರೆಗೆ ಗ್ರಾಮೀಣ ಪ್ರದೇಶಗಳನ್ನು ಗುರಿಯಾಗಿಸಿ ಕಾಮಗಾರಿಗೆ ಅನುದಾನ ಒದಗಿಸಲಾಗಿದೆ ಎಂದು ಅವರು ತಿಳಿಸಿದರು.
ಸಾರ್ವಜನಿಕರಿಂದ ಮತ್ತಷ್ಟು ಕೋರಿಕೆಗಳು ಸಲ್ಲಿಕೆಯಾಗಿದ್ದು, ಅವುಗಳನ್ನು ಪರಿಗಣನೆಗೆ ತೆಗೆದುಕೊಳ್ಳಲಾಗುವುದು ಎಂದು ಎ.ಎಸ್.ಪೊನ್ನಣ್ಣ ನವರು ಮಾಹಿತಿ ನೀಡಿದರು.

ಈ ಸಂಧರ್ಭದಲ್ಲಿ ಪ್ರಮುಖರಾದ ಇಸ್ಮಾಯಿಲ್, ರಾಜೀವ್ ಗಾಂಧಿ ಪಂಚಾಯತ್ ರಾಜ್ ಸಂಘಟನೆಯ ಜಿಲ್ಲಾಧ್ಯಕ್ಷರಾದ ತೆನ್ನಿರ ಮೈನಾ, ಕೊಡಗನ ತೀರ್ಥ ಪ್ರಸಾದ್, ಹನೀಫ್, ಬೆಟ್ಟಗೇರಿ ಗ್ರಾಮ ಪಂಚಾಯತ್ ಅಧ್ಯಕ್ಷೆ ಚಳಿಯಂಡ ಕಮಲಾ ಉತ್ತಯ್ಯ, ಮುಂಜಾಂದಿರ ಚಿಕ್ಕು ಕಾರ್ಯಪ್ಪ, ಕೇಟೋಳಿ ಮೋಹನ್ ರಾಜ್, ಅಪ್ರು ರವೀಂದ್ರ, ಹೊಸೂರು ಸೂರಜ್, ಪಿ.ಎಲ್.ಸುರೇಶ್, ಮಜೀದ್, ಬೊಳ್ದಂಡ ನಾಚಪ್ಪ, ಮಹಮದ್ ಕುಂಞ, ಮುಂಜಾಂದಿರ ಅಜಿತ್, ತೋರೆರ ಮುದ್ದಯ್ಯ, ಮುಂಜಾಂದಿರ ಸದಾ, ಕಾಳೇರಮ್ಮನ ಕುಮಾರ್, ಪಟ್ಟಡ ದೀಪಕ್, ಮೊಯ್ದು ಬೆಟ್ಟಗೇರಿ, ಹನೀಫ್ ಸಂಪಾಜೆ, ರಘು, ಮುಂಜಾಂದಿರ ಬೋಪಣ್ಣ, ಕೊಕ್ಕಂಡ ಚಂಗಪ್ಪ, ಪುದಿನೆರವನ ಆಶಾ, ಗಣೇಶ್, ಗುತ್ತಿಗೆದಾರ ನರೆನ್ ಸೋಮಯ್ಯ, ಅರ್ಚಕರಾದ ದೇವಿಪ್ರಸಾದ್ ಸೇರಿದಂತೆ ಗ್ರಾಮಸ್ಥರು ಉಪಸ್ಥಿತರಿದ್ದರು.

coorg buzz
coorg buzz