ಬೆಂಗಳೂರು : ‘ವೃಕ್ಷಮಾತೆ’ ಎಂದೇ ಖ್ಯಾತರಾಗಿದ್ದ ಪದ್ಮಶ್ರೀ ಪುರಸ್ಕೃತ ಸಾಲುಮರದ ತಿಮ್ಮಕ್ಕ(114) ಅವರು ಇಂದು ನಿಧನರಾಗಿದ್ದಾರೆ.
ವಯೋ ಸಹಜ ಅನಾರೋಗ್ಯದಿಂದ ಬಳಲುತ್ತಿದ್ದ ಅವರನ್ನು ಜಯನಗರದ ಖಾಸಗಿ ಆಸ್ಪತ್ರೆಯಲ್ಲಿ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿತ್ತು. ಚಿಕಿತ್ಸೆಗೆ ಸ್ಪಂದಿಸದೆ ಇಂದು ಕೊನೆಯುಸಿರೆಳೆದಿದ್ದಾರೆ. ಪದ್ಮಶ್ರೀ ಸೇರಿದಂತೆ ಹಲವು ಪ್ರಶಸ್ತಿಗಳು ತಿಮ್ಮಕ್ಕ ಅವರ ಮುಡಿಗೇರಿತ್ತು. ಮರಗಳನ್ನೇ ತನ್ನ ಮಕ್ಕಳಂತೆ ಕಂಡು, ನಾಡಿನಲ್ಲಿ ಸಾವಿರಾರು ಮರಗಳನ್ನು ನೆಟ್ಟು ಮಾದರಿಯಾದ ಅವರ ನಿಧನಕ್ಕೆ ನಾಡಿನ ವಿವಿಧ ವರ್ಗದ ಜನ ಸಂತಾಪ ಸೂಚಿಸಿದ್ದಾರೆ.
ಇಂದಿನ ಪೀಳಿಗೆಗೆ ಇವರ ಜೀವನ ಮಾದರಿಯಾಗಿರುತ್ತದೆ. ಫಲಾಪೇಕ್ಷೆಯಿಲ್ಲದೆ ಈ ಮಹಾತಾಯಿ ಮಾಡಿದ ಸಾಧನೆ ಸದಾ ಕಾಲ ಸ್ಮರಣೀಯ. ಕೂರ್ಗ್ ಬಝ್ ಬಳಗ ಇವರ ನಿಧನಕ್ಕೆ ಸಂತಾಪ ಸೂಚಿಸುತ್ತಿದೆ.



