Power Cut: ನಾಳೆ ಕೊಡಗಿನ ಈ ಪ್ರದೇಶಗಳಲ್ಲಿ ಕರೆಂಟ್ ಇರಲ್ಲ!

Share this post :

ವಿರಾಜಪೇಟೆ 66/11 ಕೆ.ವಿ ವಿದ್ಯುತ್ ವಿತರಣಾ ಉಪಕೇಂದ್ರದ ವಿರಾಜಪೇಟೆ ಶಾಖಾ ವ್ಯಾಪ್ತಿಯ ಪಂಜರಪೇಟೆ ಹಾಗೂ ಹೆಗ್ಗಳ ಫೀಡರ್‍ಗಳಲ್ಲಿ ನವೆಂಬರ್, 06 ರಂದು ಬೆಳಗ್ಗೆ 9 ರಿಂದ ಸಂಜೆ 6 ಗಂಟೆಯವರೆಗೆ, ವಿರಾಜಪೇಟೆ ಪಟ್ಟಣದ ತೆಲುಗರ ಬೀದಿ, ನೆಹರು ನಗರ, ಗೋಣಿಕೊಪ್ಪ ರಸ್ತೆ, ಶಾಂತಿ ನಗರ, ವಿದ್ಯಾನಗರ, ನಿಸರ್ಗ ಬಡಾವಣೆ, ಮೀನುಪೇಟೆ, ಖಾಸಗಿ ಬಸ್ ನಿಲ್ದಾಣ, ಕೆ.ಎಸ್.ಆರ್.ಟಿ.ಸಿ ಬಸ್ ನಿಲ್ದಾಣ, ಆರ್ಜಿ, ಬೇಟೋಳಿ, ಕಲ್ಲುಬಾಣೆ, ಹೆಗ್ಗಳ, ರಾಮನಗರ, ಹಾಗೂ ಸುತ್ತಮುತ್ತಲಿನ ಪ್ರದೇಶದಲ್ಲಿ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯವಾಗಲಿದೆ.

ಸೋಮವಾರಪೇಟೆ 66/11 ಕೆ.ವಿ ವಿದ್ಯುತ್ ವಿತರಣಾ ಉಪಕೇಂದ್ರದ ಕೇಂದ್ರದಿಂದ ಹೊರಹೊಮ್ಮುವ ಎಫ್2 ಶಾಂತಳ್ಳಿ ಹಾಗೂ ಎಫ್4 ಸೋಮವಾರಪೇಟೆ ಫೀಡರ್‍ನಲ್ಲಿ ನವೆಂಬರ್, 06 ರಂದು ಬೆಳಗ್ಗೆ 9 ರಿಂದ ಸಂಜೆ 6 ಗಂಟೆಯವರೆಗೆ ಹೊಸ ಲೈನ್ ಅಳವಡಿಸುವ ಕಾಮಗಾರಿ ಕೈಗೆತ್ತಿಕೊಳ್ಳುತ್ತಿರುವುದರಿಂದ ಈ ಮಾರ್ಗದಿಂದ ವಿದ್ಯುತ್ ಸರಬರಾಜಾಗುವ ಹಾನಗಲ್ಲು, ಶೆಟ್ಟಳ್ಳಿ, ಹಾನಗಲ್ಲು ಬಾಣೆ, ತೋಳೂರು ಶೆಟ್ಟಳ್ಳಿ, ಕೂತಿ ಯಡೂರು, ತಾಕೇರಿ, ಕಿರಂಗಂದೂರು, ಹರಗ, ಶಾಂತಳ್ಳಿ, ಬೆಟ್ಟದಳ್ಳಿ, ನಾಗರಳ್ಳಿ, ಕುಂದಳ್ಳಿ, ಕಿಕ್ಕರಳ್ಳಿ, ಕುಡಿಗಾಣ, ಕೊತ್ನಳ್ಳಿ ಹಾಗೂ ಸುತ್ತಮುತ್ತಲಿನ ಪ್ರದೇಶದಲ್ಲಿ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯವಾಗಲಿದೆ. ಸಾರ್ವಜನಿಕರು ಸಹಕರಿಸುವಂತೆ ಚಾವಿಸನಿನಿ ಕಾರ್ಯ ಮತ್ತು ಪಾಲನೆ ವಿಭಾಗದ ಕಾರ್ಯನಿರ್ವಾಹಕ ಎಂಜಿನಿಯರ್ ಅವರು ಕೋರಿದ್ದಾರೆ.

coorg buzz
coorg buzz