ಮಕ್ಕಂದೂರು, ಮುಕ್ಕೋಡ್ಲು ಗೌಡ ಮಹಿಳಾ ಒಕ್ಕೂಟ ರಚನೆ – ಅಧ್ಯಕ್ಷರಾಗಿ ತೋಟೆರ ನವೀನ ಕುಮಾರಿ ಆಯ್ಕೆ

Share this post :

ಮಡಿಕೇರಿ : ಮಕ್ಕಂದೂರು ಮತ್ತು ಮುಕ್ಕೋಡ್ಲು ಗೌಡ ಮಹಿಳಾ ಒಕ್ಕೂಟ ನೂತನವಾಗಿ ರಚನೆಗೊಂಡಿದ್ದು, ಅಧ್ಯಕ್ಷರಾಗಿ ತೋಟೆರ ನವೀನ ಕುಮಾರಿ ಜಯಪ್ರಕಾಶ್ ಹಾಗೂ ಪ್ರಧಾನ ಕಾರ್ಯದರ್ಶಿಯಾಗಿ ತೇಲಬೈಲು ಅಸಿಕಾ ದಿನೇಶ ಆಯ್ಕೆಯಾಗಿದ್ದಾರೆ.
ಖಜಾಂಚಿಯಾಗಿ ಕೊಟ್ಟಗೇರಿಯನ ಕಲ್ಪನಾ ಪ್ರದೀಪ್, ಉಪಾಧ್ಯಕ್ಷರಾಗಿ ಕುಂಬುಗೌಡನ ಕವಿತಾ ಸುನಿಲ್, ಸಹಕಾರ್ಯದರ್ಶಿಯಾಗಿ ಮಳ್ಳನ ಅನಿತಾ ವಿಜಯಕುಮಾರ್, ಸಂಘಟನಾ ಕಾರ್ಯದರ್ಶಿಯಾಗಿ ಕುಡೆಕಲ್ಲು ಸವಿತಾ ಸಂತೋಷ್ ಹಾಗೂ ಕುಂಬುಗೌಡನ ನಿಶ್ಚಲ್ ಜಗದೀಶ್ ನೇಮಕಗೊಂಡರು.
ಸದಸ್ಯರಾಗಿ ಲಕ್ಕಪನ ಸೌಮ್ಯ ವಿಜೇತ, ಹಿರೇಗೌಡನ ಚಲನ ತೀರ್ಥಕುಮಾರ್, ಕೋಳಿಬೈಲು ಅನಿತಾ ರಂಜು, ಮಳ್ಳನ ಭವ್ಯ ವೀರೇಂದ್ರ, ಕುಂಬುಗೌಡನ ಜಿಜಾ ಹೇಮಂತ್, ತೇಲಬೈಲು ದಿವ್ಯ ಡೆನಿಲ್, ಮಾನಡ್ಕ ಹಿತಾ ದಯಾನಂದ, ಅಣ್ಣಚ್ಚಿರ ರೇಣುಕಾ ಸತೀಶ್, ಹೊಸೊಕ್ಲು ಜಯಶ್ರೀ ಪ್ರವೀಣ, ಗೌರವ ಸಲಹೆಗಾರರಾಗಿ ಅಣ್ಣಚ್ಚಿರ ಪ್ರಮೀಳ, ತೋಟೆರ ಪದ್ಮಾವತಿ ಕೆಂಚಪ್ಪ, ಕುಂಬುಗೌಡನ ಜಲಜಾ ವಿನೋದ್ ಕುಮಾರ್ ಆಯ್ಕೆಯಾದರು.

*ಸಭೆ*
ಮಕ್ಕಂದೂರು ಮತ್ತು ಮುಕ್ಕೋಡ್ಲು ಗೌಡ ಸಮಾಜದ ಅಧ್ಯಕ್ಷ ಲಕ್ಕಪ್ಪನ ಹರೀಶ್ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಚರ್ಚಿಸಿ ಸರ್ವರ ಅನುಮೋದನೆಯೊಂದಿಗೆ ನೂತನ ಗೌಡ ಮಹಿಳಾ ಒಕ್ಕೂಟವನ್ನು ರಚಿಸಲಾಯಿತು.
ಮಾರ್ಗದರ್ಶಕರು ಹಾಗೂ ಕೊಡಗು ಗೌಡ ಸಮಾಜಗಳ ಒಕ್ಕೂಟದ ನಿರ್ದೇಶಕರಾದ ಪುದಿಯನೆರವನ ರೇವತಿ ರಮೇಶ್ ಪ್ರಾಸ್ತಾವಿಕವಾಗಿ ಮಾತನಾಡಿ, ಒಕ್ಕೂಟ ರಚನೆ, ಅದರ ಕಾರ್ಯವೈಖರಿ ಮತ್ತು ಉದ್ದೇಶದ ಬಗ್ಗೆ ವಿವರಿಸಿದರು.
ಎಲ್ಲರ ಸಹಕಾರದಿಂದ ಮಾತ್ರ ಒಂದು ಸಂಸ್ಥೆ ಬೆಳೆಯಲು ಸಾಧ್ಯ. ಪರಸ್ಪರ ಹೊಂದಾಣಿಕೆಯಿAದ, ಒಗ್ಗಟ್ಟಿನಿಂದ ಗೌಡ ಮಹಿಳಾ ಒಕ್ಕೂಟವನ್ನು ನಡೆಸಿಕೊಂಡು ಹೋಗಲು ತಮ್ಮ ಬೆಂಬಲ ಇರುವುದಾಗಿ ತಿಳಿಸಿದರು.
ಮಕ್ಕಂದೂರು ಮತ್ತು ಮುಕ್ಕೋಡ್ಲು ಗೌಡ ಸಮಾಜದ ಅಧ್ಯಕ್ಷ ಲಕ್ಕಪ್ಪನ ಹರೀಶ್ ಅವರು ಸಲಹೆ ಸೂಚನೆಗಳನ್ನು ನೀಡಿ, ಮಹಿಳಾ ಒಕ್ಕೂಟಕ್ಕೆ ಗೌಡ ಸಮಾಜದ ಬೆಂಬಲವಿದೆ ಎಂದರು.
ಗೌಡ ಸಮಾಜದ ಉಪಾಧ್ಯಕ್ಷ ಕೊಟ್ಟಕೇರಿಯನ ಪ್ರದೀಪ್ ಮಾತನಾಡಿ ನೂತನ ಒಕ್ಕೂಟಕ್ಕೆ ಶುಭ ಹಾರೈಸಿ, ಸಲಹೆ ನೀಡಿದರು.
ಮಾರ್ಗದರ್ಶಕರು ಹಾಗೂ ಕೊಡಗು ಮತ್ತು ದಕ್ಷಿಣ ಕನ್ನಡ ಒಕ್ಕಲಿಗ ಗೌಡ ಮಹಿಳಾ ಒಕ್ಕೂಟದ ಅಧ್ಯಕ್ಷರಾದ ಮೂಟೇರ ಪುಷ್ಪಾವತಿ ರಮೇಶ್ ಉಪಸ್ಥಿತರಿದ್ದರು.
ಕುಂಬುಗೌಡನ ಕವಿತಾ ಸುನಿಲ್ ಪ್ರಾರ್ಥಿಸಿದರು. ತೋಟೆರ ನವೀನ ಕುಮಾರಿ ಜಯಪ್ರಕಾಶ್ ಸ್ವಾಗತಿಸಿದರು. ಕುಂಬುಗೌಡನ ಲೇಖಾ ವಂದಿಸಿದರು.

coorg buzz
coorg buzz