ನವದೆಹಲಿ : ಇತ್ತೀಚಿನ ದಿನದಲ್ಲಿ ಬೀದಿ ಶ್ವಾನಗಳ ಹಾವಳಿ ಮಿತಿ ಮೀರಿದೆ. ಈ ಸಮಸ್ಯೆ ಇಂಥದ್ದೇ ಪ್ರದೇಶಕ್ಕೆ ಸೀಮಿತ ಅಂತ ಹೇಳುವುದಕ್ಕಾಗಲ್ಲ. ದೇಶದ ಉದ್ದಗಲಕ್ಕೂ ಇದು ಗಂಭೀರ ಸಮಸ್ಯೆಯಾಗಿ ಪರಿಣಮಿಸಿದೆ. ಈ ವಿಚಾರವನ್ನು ಸುಪ್ರೀಂ ಕೋರ್ಟ್ ಗಂಭೀರವಾಗಿ ಪರಿಗಣಿಸಿದ್ದು, ಎಲ್ಲಾ ರಾಜ್ಯ ಸರ್ಕಾರಗಳಿಗೆ ನೋಟಿಸ್ ಜಾರಿ ಮಾಡಿದೆ.
ಬೀದಿ ಶ್ವಾನಗಳ ಹಾವಳಿ ಹೆಚ್ಚಾದ ಸಂಬಂಧ ಪ್ರಕರಣದ ವಿಚಾರಣೆ ನಡೆಸಿದ ಸರ್ವೋಚ್ಛ ನ್ಯಾಯಾಲಯ, ಎಲ್ಲಾ ರಾಜ್ಯಗಳಿಂದಲೂ ಬೀದಿ ಶ್ವಾನಗಳ ದಾಳಿ ಬಗ್ಗೆ ವರದಿಗಳು, ದೂರುಗಳು ಬರುತ್ತಿವೆ ಎಂದು ಆತಂಕ ವ್ಯಕ್ತಪಡಿಸಿದೆ. ಜೊತೆಗೆ ಬೀದಿಶ್ವಾನಗಳ ಕಡಿವಾಣಕ್ಕೆ ಏನೆಲ್ಲ ಕ್ರಮ ಕೈಗೊಳ್ಳಲಾಗಿದೆ ಎಂಬ ವರದಿ ನೀಡಬೇಕೆಂದು ಎಲ್ಲಾ ರಾಜ್ಯ ಸರ್ಕಾರಕ್ಕೆ ಸೂಚನೆ ನೀಡಿದೆ.
ಈ ಬಗ್ಗೆ ಮಾಹಿತಿ ನೀಡಿ ಮುಂದಿನ ವಿಚಾರಣೆಯಲ್ಲಿ ಅಗತ್ಯ ಮಾಹಿತಿ ಜೊತೆಗೆ ಹಾಜರಾಗುವಂತೆ ಎಲ್ಲಾ ರಾಜ್ಯಗಳ ಮುಖ್ಯಕಾರ್ಯದರ್ಶಿಗಳಿಗೆ ಸೂಚಿಸಿದೆ.



