ಪೊನ್ನಂಪೇಟೆ: ಕಾನೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ನಿಯಮಿತವು 2024-2025 ನೇ ಸಾಲಿನಲ್ಲಿ ರೂ. 73.10 ಲಕ್ಷ ಮೊತ್ತದ ನಿವ್ವಳ ಲಾಭಗಳಿಸಿದೆ ಎಂದು ಸಂಘದ ಅಧ್ಯಕ್ಷರಾದ ಕಾಡ್ಯಮಾಡ ಎಸ್. ಭರತ್ ತಿಳಿಸಿದ್ದಾರೆ. ಸಂಘದ ಸಭಾಂಗಣದಲ್ಲಿ ಇತ್ತೀಚಿಗೆ ನಡೆದ 2024-25ನೇ ಸಾಲಿನ ವಾರ್ಷಿಕ ಮಹಾಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಹಿರಿಯರು ಕಟ್ಟಿ ಬೆಳೆಸಿ ಭದ್ರಬುನಾದಿ ಹಾಕಿಕೊಟ್ಟ ಕಾನೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ನಿಯಮಿತವು ಸದಸ್ಯರ ಮತ್ತು ಗ್ರಾಹಕರ ನೆರವಿನಿಂದ ಉತ್ತಮವಾಗಿ ನಡೆಯುತ್ತಿದೆ. ಪ್ರಸ್ತುತ ಸದಸ್ಯರಿಗೆ ಶೇ 25% ಡಿವಿಡೆಂಡ್ ನೀಡಲು ನಿರ್ದಾರ ಕೈಗೊಳ್ಳಲಾಗಿದೆ ತಿಳಿಸಿದರು.
ಸಂಘದಲ್ಲಿ ಪ್ರಸ್ತುತ ಒಟ್ಟು 1570 ಸದಸ್ಯರಿದ್ದು, ಈ ಸಾಲಿನ ಸಂಘದ ಮಹಾಸಭೆಗೆ ಒಟ್ಟು 1143 ಸದಸ್ಯರು ಪಾಲ್ಗೊಂಡಿದ್ದಾರೆ. ಸಂಘದಲ್ಲಿ 31.03.2025ರ ಅವಧಿಗೆ ರೂ. 1,77,01,000/- ಪಾಲು ಬಂಡವಾಳ ಹಾಗು ಸಂಚಯ ಠೇವಣಿ, ನಿರಖು ಠೇವಣಿ . ಪಿಗ್ಮಿ ಠೇವಣಿ ಮತ್ತು ಸಿಬ್ಬಂದಿ ಠೇವಣಿ, ಮರಣ ನಿಧಿ ಸೇರಿ ಒಟ್ಟು ರೂ. 8,92,25,098/- ಮೊತ್ತದ ಠೇವಣಿ ಇರುತ್ತದೆ. ಸರ್ಕಾರದಿಂದ ಲೀಸ್ ಆದಾರದಲ್ಲಿ ಪಡೆದಿರುವ 50 ಎಕ್ರೆ ಜಾಗದಲ್ಲಿ ಸಂಘಕ್ಕೆ ಉತ್ತಮ ಆದಾಯ ಬರುತ್ತಿದೆ ಎಂದು ಭರತ್ ಅವರು ಮಹಾಸಭೆಗೆ ವಿವರಿಸಿದರು.
ಸಂಘದಲ್ಲಿ ರೂ. 3,52,93,124/- ಮೊತ್ತದ ಕ್ಷೇಮ ನಿಧಿ ಇದ್ದು, ರೂ.3,74,99,543/- ಮೊತ್ತದ ಕ್ಷೇಮ ನಿಧಿ ಜಿಲ್ಲಾ ಬ್ಯಾಂಕಿಗೆ ಪಾವತಿಯಾಗಿದೆ. ರೂ. 1,43,68,282/- ಮೊತ್ತದ ಕಾಫಿ ತೋಟದ ಬಂಡವಾಳ ಮತ್ತು ಅಭಿವೃದ್ಧಿ ನಿಧಿ ಸಂಘದಲ್ಲಿ ಇರುತ್ತದೆ. ಅಲ್ಲದೆ ಕಟ್ಟಡ ನಿಧಿ ಹಾಗು ಇತರ ನಿಧಿಗಳು ಸೇರಿ ರೂ. 1,97,91,164/- ಮೊತ್ತ ಸಂಘದಲ್ಲಿ ಇರುತ್ತದೆ ಎಂದು ಅವರು ಇದೇ ಸಂದರ್ಭದಲ್ಲಿ ಮಹಾಸಭೆಗೆ ಮಾಹಿತಿ ಒದಗಿಸಿದರು.
ಸಂಘದ ಸದಸ್ಯರುಗಳಿಗೆ ಫಸಲು ಸಾಲ, ಪಿಗ್ನಿ ಠೇವಣಿ ಸಾಲ, ಸ್ವಸಹಾಯ ಗುಂಪು ಸಾಲ, ಆಭರಣ ಸಾಲ, ಗೊಬ್ಬರ ಸಾಲ, ಕಾಫಿ ಈಡೀನ ಸಾಲ, ನಿರಖು ಠೇವಣಿ ಸಾಲ ಮೊದಲಾದ ಸೌಲಭ್ಯಗಳನ್ನು ವಿತರಿಸಲಾಗುತ್ತಿದೆ. ಕಳೆದ ಸಾಲಿನಲ್ಲಿ ಪಡೆದ ಎಲ್ಲಾ ಸಾಲಗಳು ಸದಸ್ಯರಿಂದ ಶೇ.100% ರಷ್ಟು ಮರುಪಾವತಿಯಾಗಿ ಪ್ರಗತಿ ಸಾಧಿಸಲಾಗಿದೆ ಎಂದು ಭರತ್ ಅವರು ಮಾಹಿತಿ ನೀಡಿದರು.
ಸಂಘದ ಸದಸ್ಯರ ಪ್ರತಿಭಾನ್ವಿತ ಮಕ್ಕಳಿಗೆ ಪ್ರೋತ್ಸಾಹ ನೀಡುವ ಸಲುವಾಗಿ ಕಳೆದ ಶೈಕ್ಷಣಿಕ ಸಾಲಿನಲ್ಲಿ 10ನೇ ತರಗತಿ ಮತ್ತು ದ್ವಿತೀಯ ಪಿ.ಯು.ಸಿ. ಪರೀಕ್ಷೆಯಲ್ಲಿ ಹೆಚ್ಚು ಅಂಕ ಪಡೆದು ಉತ್ತೀರ್ಣರಾದ ಸಂಘದ ಸದಸ್ಯರ ಹಾಗೂ ಹಾಗು ಕಾನೂರು-ಕೋತೂರು ವ್ಯಾಪ್ತಿಯಲ್ಲಿ ವಿದ್ಯುತ್ ಕೆಲಸ ನಿರ್ವಹಿಸುವ ಲೈನ್ ಮ್ಯಾನ್ ಗಳಿಗೆ ಮಹಾಸಭೆಯಲ್ಲಿ ಪ್ರೋತ್ಸಾಹ ಧನ ನೀಡಿ ಗೌರವಿಸಲಾಯಿತು.
ಸಂಘವು ಸದಸ್ಯರ ಅನುಕೂಲಕಾಗಿ ಸಂಘದಲ್ಲಿ ಮಾರಾಟ ಮಾಡುತ್ತಿರುವ ರಸಗೊಬ್ಬರ, ಕ್ರಿಮಿನಾಶಕ, ಹತ್ಯಾರು ಕೋವಿ ತೋಟವನ್ನು ನಮ್ಮಲಿಯೇ ಖರೀದಿಸಿ ಸಂಘದ ಸರ್ವತೋಮುಖ ಬೆಳವಣಿಗೆಗೆ ಸಹಕರಿಸುವಂತೆ ಇದೇ ಸಂದರ್ಭದಲ್ಲಿ ಅಧ್ಯಕ್ಷರಾದ ಭರತ್ ಅವರು ಕೋರಿದರು.
ಮಹಾಸಭೆಯಲ್ಲಿ ಉಪಾಧ್ಯಕ್ಷರಾದ ಸಿ . ಬಿ. ಬೆಳ್ಳಪ್ಪ, ನಿರ್ದೇಶಕರುಗಳಾದ ಎ.ಎ. ವಿವೇಕ್,ಎ. ಎಂ ಅಚ್ಚಯ್ಯ, ಸಿ. ಎನ್. ಬಿದ್ದಪ್ಪ, ಕೆ. ಎಸ್. ಬೋಪಣ್ಣ, ಸಿ. ಪಿ. ಶಮ್ಮಿ, ಕೆ. ಎಂ. ಕುಸುಮ, ಎಂ ಕೆ. ರವಿ, ಕೆ.ಎನ್. ನಾಚ್ಚಪ್ಪ, ಹೆಚ್.ಕೆ. ರಾಜ, ಎಂ.ಎಂ. ಜಗನ್ನಾಥ್, ಪಿ.ಎಸ್. ಸುಮಿತ್ರ ಹಾಜರಿದ್ದರು.



