ಮಡಿಕೇರಿ : ಮತಗಳ್ಳತನದ ಬಗ್ಗೆ ಜಾಗೃತಿ ಮೂಡಿಸುವ ಸಲುವಾಗಿ ಕಾಂಗ್ರೆಸ್ ಪಕ್ಷದ ವತಿಯಿಂದ ದೇಶಾದ್ಯಂತ ಸಹಿ ಸಂಗ್ರಹ ಅಭಿಯಾನ ನಡೆಯುತ್ತಿದೆ. ಜಿಲ್ಲಾ ಕಾಂಗ್ರೆಸ್ ವತಿಯಿಂದ ಕೊಡಗು ಜಿಲ್ಲೆಯಲ್ಲೂ ಈ ಅಭಿಯಾನ ಆರಂಭಿಸಲಾಗಿದೆ.
ಮಡಿಕೇರಿ ಬ್ಲಾಕ್ ವ್ಯಾಪ್ತಿಯಲ್ಲಿ 40 ಸಾವಿರ ಮತದಾರರ ಸಹಿ ಸಂಗ್ರಹಿಸುವ ಗುರಿ ಇದೆ. ಬುಧವಾರದಿಂದ ಮನೆ, ಮನೆಗೆ ತೆರಳಿ ಸಹಿ ಸಂಗ್ರಹಿಸಲಾಗುವುದು ಎಂದು ಕ್ ಕಾಂಗ್ರೆಸ್ ಅಧ್ಯಕ್ಷ ಹೆಚ್.ಎ. ಹಂಸ ತಿಳಿಸಿದ್ದಾರೆ.
ನೈಜ ಮತದಾರರನ್ನು ನಿಗ್ರಹಿಸಲು ಮೋಸದ ಜಾಲಗಳನ್ನು ಬಳಸಿಕೊಂಡು ಚುನಾವಣೆಯಲ್ಲಿ ಅಕ್ರಮಗಳು ನಡೆಯುತ್ತಿವೆ. ಇದು ಪರೋಕ್ಷವಾಗಿ ಜನರ ಧ್ವನಿಯನ್ನು ಅಡಗಿಸುವ ಷಡ್ಯಂತ್ರವಾಗಿದೆ. ಮತಗಳ್ಳತನವನ್ನು ತಡೆಯುವ ಮೂಲಕ ಪ್ರಜಾಪ್ರಭುತ್ವ ಉಳಿಸುವ ಉದ್ದೇಶದೊಂದಿಗೆ ಕಾಂಗ್ರೆಸ್ ಪಕ್ಷ ಅಭಿಯಾನ ಆರಂಭಿಸಿದೆ ಎಂದು ಅವರು ಪ್ರತಿಕ್ರಿಯಿಸಿದ್ದಾರೆ.



