ಅನ್ನ ಭಾಗ್ಯ ಯೋಜನೆಯಲ್ಲಿ ಮಹತ್ತರ ಬದಲಾವಣೆ – ಅಕ್ಕಿಯ ಬದಲು ಸಿಗಲಿದೆ ʼಇಂದಿರಾ ಫುಡ್‌ ಕಿಟ್‌ʼ..!

Share this post :

ಬೆಂಗಳೂರು : ರಾಜ್ಯ ಸರ್ಕಾರ ಅನ್ನಭಾಗ್ಯ ಯೋಜನೆಯಲ್ಲಿ ಮಹತ್ತರ ಬದಲಾವಣೆ ಮಾಡಿದೆ. ಈವರೆಗೆ ಅನ್ನಭಾಗ್ಯ ಯೋಜನೆಯಡಿ ವ್ಯಕ್ತಿಗೆ 05 ಅಕ್ಕಿಯನ್ನು ರಾಜ್ಯ ಸರ್ಕಾರ ನೀಡುತ್ತಿತ್ತು. ಆದರೆ ಇನ್ನು ಮುಂದೆ ಅದು ರದ್ದಾಗಲಿದ್ದು, ಅದರ ಬದಲಿಗೆ ಫುಡ್‌ ಕಿಟ್‌ ನೀಡುವುದಕ್ಕೆ ಸರ್ಕಾರ ಮುಂದಾಗಿದೆ.
ಕೇಂದ್ರ ಸರ್ಕಾರದಿಂದ 05 ಕೆಜಿ ಅಕ್ಕಿ ಸಿಗಲಿದ್ದು, ರಾಜ್ಯ ಸರ್ಕಾರದ ಅಕ್ಕಿಯ ಬದಲಿಗೆ ಫುಡ್‌ ಕಿಟ್‌ ಅನ್ನು ನೀಡಲಿದೆ. ಇಂದಿರಾ ಆಹಾರ ಕಿಟ್‌ನಲ್ಲಿ ಎಎವೈ ಮತ್ತು ಪಿಎಚ್ಎಚ್ ಪಡಿತರ ಫಲಾನುಭವಿಗಳಿಗೆ ತೊಗರಿ ಬೆಳೆ 2ಕೆಜಿ, ಅಡುಗೆ ಎಣ್ಣೆ 1ಲೀ. ಸಕ್ಕರೆ 1ಕೆಜಿ, ಉಪ್ಪು 1ಕೆಜಿ ಸಿಗಲಿದೆ. 61.19 ಕೋಟಿ ರೂ. ಮೊತ್ತದಲ್ಲಿ ಈ ಯೋಜನೆ ಜಾರಿಗೆ ಸಚಿವ ಸಂಪುಟ ನಿರ್ಣಯಿಸಿದೆ.

coorg buzz
coorg buzz