ಮೂರ್ನಾಡು : ಇಲ್ಲಿನ ಬಾಡಗ ಅಂಗನವಾಡಿ lkg ಕೇಂದ್ರದಲ್ಲಿ ಪೋಷನ್ ಮಾಸಾಚರಣೆ ಅಂಗವಾಗಿ ʼಪೋಷಣ್ ಭೀ ಪಢಾಯಿ ಭೀʼ ಕಾರ್ಯಕ್ರಮ ಜರುಗಿತು.
ಮಕ್ಕಳಿಂದ ಹಣ್ಣಿನ ಗಿಡ ನೆಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ಆಟಗಳ ಮೂಲಕ ಮಕ್ಕಳ ಸರ್ವತೋಮುಖ ಬೆಳವಣಿಗೆಗೆ ಪೂರಕವಾದಂತ ಚಟುವಟಿಕೆಗಳನ್ನು ಮಾಡಿಸಲಾಯಿತು. ಜೊತೆಗೆ ಮನೆಗಳ ಸುತ್ತಮನುತ್ತ ಆರೋಗ್ಯಕರ ಹಣ್ಣಿನ ಗಿಡಗಳನ್ನು ನೆಡಲು ಪೋಷಕರಿಗೆ ಪ್ರೋತ್ಸಾಹಿಸಲಾಯಿತು.
ಪ್ರಭಾರ ಸಹಾಯಕ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಮೇಪಾಡಂಡ ಸವಿತಾ ಕೀರ್ತನ್, ಕಾಂತೂರು ಮುರ್ನಾಡು ಗ್ರಾಮ ಪಂಚಾಯಿತಿ ಅಧ್ಯಕ್ಷ ಕುಶನ್ ರೈ, ಉಪಾಧ್ಯಕ್ಷೆ ರೇಖಾ, ಅಂಗನವಾಡಿ ಕಾರ್ಯಕರ್ತೆ ಜಯಂತಿ ಬಿ.ಬಿ, ಆಶಾ ಕಾರ್ಯಕರ್ತೆ ಚಂದ್ರಿಕಾ ಹಾಜರಿದ್ದರು.




