ಮಡಿಕೇರಿ : ಮಡಿಕೇರಿ ತಾಲೂಕು ಬಂಟರ ಸಂಘದ ವತಿಯಿಂದ ಜಿಲ್ಲಾ ಮಟ್ಟದ ಪ್ರತಿಭಾ ಪುರಸ್ಕಾರ ಸಮಾರಂಭ ಅ.26ರಂದು ನಗರದ ಗಾಂಧಿ ಮೈದಾನದಲ್ಲಿ ನಡೆಯಲಿದೆ.
ಜಿಲ್ಲಾ ಬಂಟರ ಸಂಘ, ತಾಲೂಕು ಮಹಿಳಾ ಘಟಕ, ಯುವ ಬಂಟ್ಸ್ ಅಸೋಸಿಯೇಷನ್ ಸೇರಿದಂತೆ ವಿವಿಧ ಘಟಕಗಳ ಸಹಯೋಗದಲ್ಲಿ ನಡೆಯಲಿರುವ ಕಾರ್ಯಕ್ರಮದಲ್ಲಿ ಬಂಟ ಸಮುದಾಯದ ಸಾಧಕರಿಗೆ, ಚುನಾಯಿತ ಜನಪ್ರತಿನಿಧಿಗಳಿಗೆ, ಹಿರಿಯ ದಂಪತಿಗೆ ಸನ್ಮಾನ, ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಹಮ್ಮಿಕೊಳ್ಳಲಾಗಿದೆ. ವಿಶೇಷ ಆಕರ್ಷಣೆಯಾಗಿ ಆದರ್ಶ ದಂಪತಿ ಕಾರ್ಯಕ್ರಮ ಏರ್ಪಡಿಸಲಾಗಿದೆ.
ಬೆಳಗ್ಗೆ 9.30ಕ್ಕೆ ತಾಲೂಕು ಸಂಘದ ಅಧ್ಯಕ್ಷ ಸದಾಶಿವ ರೈ ಅಧ್ಯಕ್ಷತೆಯಲ್ಲಿ ನಡೆಯಲಿರುವ ಕಾರ್ಯಕ್ರಮವನ್ನು ಚಲನಚಿತ್ರ ನಟರಾದ ಸುರೇಶ್ ರೈ ಮತ್ತು ಭವ್ಯಶ್ರೀ ರೈ ಉದ್ಘಾಟಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಪ್ರಮುಖರಾದ ಸವಿತಾ ರೈ, ಸತೀಶ್ ರೈ, ಬಾಲಕೃಷ್ಣ ರೈ, ಗಿರೀಶ್ ರೈ, ಚಂದ್ರಶೇಖರ್ ರೈ, ಜಯಂತಿ ಲವ ರೂ, ಯಶೋಧ ಶಂಭು ಶೆಟ್ಟಿ, ವಿಜಯಲಕ್ಷ್ಮೀ ರವಿ ಶೆಟ್ಟಿ, ಸಾವಿತ್ರಿ ಉದಯ್ ಶೆಟ್ಟಿ, ಸೌಮ್ಯ ಸದಾಶಿವ ಶೆಟ್ಟಿ, ಸುಜಾತ ಗಣೇಶ್ ರೈ, ಶರತ್ ಶೆಟ್ಟಿ, ದಯಾನಂದ ರೈ, ಪವಿತ್ರಾ ರಾಜೇಶ್ ರೈ, ಅಶ್ವಿನಿ ಪುರುಷೋತ್ತಮ್ ರೈ ಪಾಲ್ಗೊಳ್ಳಲಿದ್ದಾರೆ. ಉಪನ್ಯಾಸಕಿ ಪ್ರತಿಮಾ ಹರೀಶ್ ರೈ ಮುಖ್ಯ ಭಾಷಣ ಮಾಡಲಿದ್ದಾರೆ.
ಅಪರಾಹ್ನ 2.30ಕ್ಕೆ ಸಮಾರೋಪ ಸಮಾರಂಣ ನಡೆಯಲಿದ್ದು, ಪುತ್ತೂರು ಶಾಸಕ ಅಶೋಕ್ ಕುಮಾರ್ ರೈ ವೇದಿಕೆ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಬಿ.ಡಿ. ಜಗದೀಶ್ ರೈ, ಸದಾಶಿವ ರೈ, ಹೇಮನಾಥ್ ಶೆಟ್ಟಿ, ಬಿ.ಕೆ. ರವೀಂದ್ರ ರೈ, ಬಿ.ಬಿ. ಐತಪ್ಪ ರೈ, ರವೀಂದ್ರ ರೈ, ರತ್ನಾಕರ ರೈ ಸೇರಿದಂತೆ ಪ್ರಮುಖ ಗಣ್ಯರು ಪಾಲ್ಗೊಳ್ಳಲಿದ್ದಾರೆ. ವಿದ್ಯಾ ರೈ ಪಡುಮಲೆ ಮುಖ್ಯ ಭಾಷಣ ಮಾಡಲಿದ್ದಾರೆ.



