ಬೆಂಗಳೂರು : ನ್ಯಾಷನಲ್ ಕ್ರಶ್ ರಶ್ಮಿಕಾ ಮಂದಣ್ಣ ಈಗ ಮತ್ತೊಮ್ಮೆ ಸುದ್ದಿಯಲ್ಲಿದ್ದಾರೆ. ಟಾಲಿವುಡ್ ನಟ ವಿಜಯ್ ದೇವರಕೊಂಡ ಜೊತೆ ನಿಶ್ಚಿತಾರ್ಥ ಮಾಡಿಕೊಂಡಿದ್ದು, ಹೊಸ ಜೀವನಕ್ಕೆ ಹೆಜ್ಜೆಯಿಡಲು ಕೊಡಗಿನ ಸುಂದರಿ ಸಿದ್ಧರಾಗುತ್ತಿದ್ದಾರೆಂಬ ವಿಚಾರ ರಾಷ್ಟ್ರಮಟ್ಟದಲ್ಲಿ ಸುದ್ದಿಯಾಗುತ್ತಿದೆ.
ಈ ಬಗ್ಗೆ ಪ್ರತಿಷ್ಠಿತ ಮಾಧ್ಯಮಗಳು ವರದಿ ಪ್ರಕಟಿಸಿದ್ದು, ರಶ್ಮಿಕಾ ಹಾಗೂ ವಿಜಯ್ ದೇವರಕೊಂಡ ಆಪ್ತರ ಸಮ್ಮುಖದಲ್ಲಿ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. ಮುಂದಿನ ವರ್ಷ ಫೆಬ್ರವರಿಯಲ್ಲಿ ವಿವಾಹವಾಗಲಿದ್ದಾರೆಂದು ವರದಿ ಭಿತ್ತರಿಸಿದೆ. ಆದರೆ ಈ ಬಗ್ಗೆ ಇಬ್ಬರು ತಾರೆಯರ ಕಡೆಯವರು ಯಾರೂ ಕೂಡಾ ಅಧಿಕೃತ ಹೇಳಿಕೆ ನೀಡಿಲ್ಲ.
ನಿಶ್ಚಿತಾರ್ಥ ಕಾರ್ಯಕ್ರಮದಲ್ಲಿ ಇಬ್ಬರ ಆಪ್ತ ಬಳಗದವರು ಮಾತ್ರ ಭಾಗಿಯಾಗಿದ್ದರು ಅಂತ ಹೇಳಲಾಗಿದೆ. ಹಿಂದಿನಿಂದಲೂ ವಿಜಯ್ ಹಾಗೂ ರಶ್ಮಿಕಾ ಬಹಳ ಆಪ್ತವಾಗಿ ಕಾಣಿಸಿಕೊಂಡು ಅಭಿಮಾನಿ ವಲಯದಲ್ಲಿ ಚರ್ಚೆಗೆ ಕಾರಣರಾಗಿದ್ದರು. ಇದೀಗ ಇವರ ಆಪ್ತತೆ ಹೊಸ ಪಯಣದತ್ತ ಸಾಗುವ ಎಲ್ಲಾ ಸೂಚನೆ ಸಿಕ್ಕಂತಿದೆ. ಇದಕ್ಕೆ ಶೀಘ್ರದಲ್ಲೇ ಇಬ್ಬರು ಸ್ಪಷ್ಟನೆ ನೀಡಲಿದ್ದಾರೆ.



