ಸುಂಟಿಕೊಪ್ಪ ಚಿನ್ನದ ಅಂಗಡಿಯಲ್ಲಿ ಚಿನ್ನದ ಸರ ಕಳವು – ಮೂವರು ಮಹಿಳೆಯರ ಬಂಧನ

Share this post :

ಮಡಿಕೇರಿ : ಸುಂಟಿಕೊಪ್ಪದ ಫ್ಯಾಷನ್ ಜ್ಯುವೆಲರಿಯಲ್ಲಿ ಸೆ.14 ರಂದು ನಡೆದ ಚಿನ್ನಾಭರಣ ಕಳವು ಪ್ರಕರಣದ ಸಂಬಂಧ ಮೂವರು ಆರೋಪಿಗಳನ್ನು ಕೊಡಗು ಜಿಲ್ಲಾ ಪೊಲೀಸರು ಬಂಧಿಸಿದ್ದಾರೆ.
ಮಹಾರಾಷ್ಟ್ರ ಸಾಂಗ್ಲಿ ಜಿಲ್ಲೆಯ ಅಲ್ಪನಾ(37), ಬಬಿತಾ(47), ಪೂಜಾ(29) ಬಂಧಿತರು. ಬಂಧಿತರಿಂದ 22.180 ಗ್ರಾಂ ತೂಕದ 2 ಚಿನ್ನದ ಸರ ವಶಪಡಿಸಿಕೊಳ್ಳಲಾಗಿದೆ. ಅಂಗಡಿಯಲ್ಲಿ ಚಿನ್ನಾಭರಣ ಖರೀದಿಸುವ ನೆಪದಲ್ಲಿ ಬಂದಿದ್ದ ಮೂವರು ಮಹಿಳೆಯರು, ಅಂಗಡಿಯವರ ಗಮನಕ್ಕೆ ಬಾರದಂತೆ 22 ಗ್ರಾಂ ತೂಕದ 2 ಚಿನ್ನದ ಸರಗಳನ್ನು ಕದ್ದೊಯ್ದಿದ್ದರು. ಈ ಬಗ್ಗೆ ಸುಂಟಿಕೊಪ್ಪ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಆರೋಪಿಗಳ ಪತ್ತೆಗೆ ಡಿವೈಎಸ್ಪಿ ಚಂದ್ರಶೇಖರ್.ಪಿ ನೇತೃತ್ವದಲ್ಲಿ ಸಿಪಿಐ ದಿನೇಶ್ ಕುಮಾರ್, ಪಿ.ಎಸ್.ಐ. ಮೋಹನ್ ರಾಜು, ಪಿ.ಎಸ್.ಐ. ಭಾರತಿ ಕೆ.ಹೆಚ್ ನೇತೃತ್ವದ ತಂಡವನ್ನು ರಚಿಸಲಾಗಿತ್ತು.

coorg buzz
coorg buzz